ETV Bharat / bharat

ಟೀಂ ಇಂಡಿಯಾ ಗೆಲ್ಲಿಸಿ ಆಯ್ತು... ಈಗ ಕರ್ನಾಟಕ ಗೆಲ್ಲಿಸಲು ಮಯಾಂಕ್ ಮೈದಾನಕ್ಕೆ​! - ಕರ್ನಾಟಕ ಸೆಮಿಫೈನಲ್​​

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬ್ಯಾಟಿಂಗ್​ ಮಳೆ ಹರಿಸಿರುವ ಮಯಾಂಕ್​ ಅಗರವಾಲ್​ ಇದೀಗ ವಿಜಯ್​ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನ ಚಾಂಪಿಯನ್​ ಮಾಡಲು ಕಣಕ್ಕಿಳಿಯಲಿದ್ದಾರೆ.

ಮಯಾಂಕ್​ ಅಗರವಾಲ್​
author img

By

Published : Oct 22, 2019, 5:42 PM IST

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಎರಡು ಶತಕ ಸಿಡಿಸಿ ಮಿಂಚಿರುವ ಮಯಾಂಕ್​ ಅಗರವಾಲ್​ ಹರಿಣಗಳ ವಿರುದ್ಧದ ಟೆಸ್ಟ್​ ಸರಣಿ ಜಯಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್​​ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದ್ದು, ಇದೀಗ ಮುಂದಿನ ಬಾಂಗ್ಲಾ ವಿರುದ್ಧದ ಕ್ರಿಕೆಟ್​ ಸರಣಿಗೆ ಸಜ್ಜುಗೊಳ್ಳಬೇಕಾಗಿದೆ. ಆದರೆ, ಬಾಂಗ್ಲಾ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಇದೇ ತಿಂಗಳ 24ರಂದು ಟೀಂ ಇಂಡಿಯಾ ಪ್ರಕಟವಾಗಲಿದ್ದು, ತದನಂತರ ಸರಣಿಯಲ್ಲಿ ಭಾಗಿಯಾಗುವುದಕ್ಕೂ ಕಾಲಾವಕಾಶವಿದೆ.

Mayank Agarwal
ಮಯಾಂಕ್​ ಅಗರವಾಲ್​ ಸಂಭ್ರಮ

ಹೀಗಾಗಿ ಆರಂಭಿಕ ಆಟಗಾರ ಮಯಾಂಕ್​ ಅಗರವಾಲ್​ ಇದೀಗ ಕರ್ನಾಟಕ ತಂಡದ ಪರ ವಿಜಯ್​ ಹಜಾರೆ ಟೂರ್ನಿಯಲ್ಲಿ ಭಾಗಿಯಾಗಲು ಸಿದ್ಧರಾಗಿದ್ದಾರೆ. ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಹಾಕಿರುವ ಕರ್ನಾಟಕ ತಂಡ ಅಕ್ಟೋಬರ್​ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚತ್ತೀಸಗಢ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಮನೀಷ್ ಪಾಂಡೆ ನೇತೃತ್ವದ ತಂಡದಲ್ಲಿ ಮಯಾಂಕ್​ ಅಬ್ಬರಿಸಲು ಸಜ್ಜಾಗಿರುವ ಕಾರಣ ತಂಡ ಈಗಾಗಲೇ ಅಭಿಷೇಕ್​ ಕೈಬಿಟ್ಟಿದೆ.

ಇನ್ನೊಂದೆಡೆ ತಮಿಳುನಾಡು ತಂಡದ ಪರ ಆಲ್​ರೌಂಡರ್​ ಆರ್​ ಅಶ್ವಿನ್​ ಸಹ ಸೆಮಿಫೈನಲ್​​ನಲ್ಲಿ ಭಾಗಿಯಾಗಲಿದ್ದು, ಗುಜರಾತ್​ ತಂಡದ ವಿರುದ್ಧ ತಮ್ಮ ಬೌಲಿಂಗ್​ ಕೈಚೆಳಕ ತೋರಿಸಲಿದ್ದಾರೆ. ಒಂದು ವೇಳೆ ಸೆಮೀಸ್​ನಲ್ಲಿ ಕರ್ನಾಟಕ- ತಮಿಳುನಾಡು ಗೆಲುವು ದಾಖಲು ಮಾಡಿದರೆ ಅಕ್ಟೋಬರ್​ 25ರಂದು ಫೈನಲ್​​ನಲ್ಲಿ ಮುಖಾಮುಖಿಯಾಗಲಿವೆ.

Intro:Body:

 ಟೀಂ ಇಂಡಿಯಾ ಗೆಲ್ಲಿಸಿ ಆಯ್ತು... ಈಗ ಕರ್ನಾಟಕ ಗೆಲ್ಲಿಸಲು ಮಯಾಂಕ್ ಮೈದಾನಕ್ಕೆ​! 

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಎರಡು ಶತಕ ಸಿಡಿಸಿ ಮಿಂಚಿರುವ ಮಯಾಂಕ್​ ಅಗರವಾಲ್​ ಹರಿಣಗಳ ವಿರುದ್ಧದ ಟೆಸ್ಟ್​ ಸರಣಿ ಜಯಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್​​ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದ್ದು, ಇದೀಗ ಮುಂದಿನ ಬಾಂಗ್ಲಾ ವಿರುದ್ಧದ ಕ್ರಿಕೆಟ್​ ಸರಣಿಗೆ ಸಜ್ಜುಗೊಳ್ಳಬೇಕಾಗಿದೆ. ಆದರೆ ಬಾಂಗ್ಲಾ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಇದೇ ತಿಂಗಳ 24ರಂದು ಟೀಂ ಇಂಡಿಯಾ ಪ್ರಕಟವಾಗಲಿದ್ದು, ತದನಂತರ ಸರಣಿಯಲ್ಲಿ ಭಾಗಿಯಾಗುವುದಕ್ಕೂ ಕಾಲಾವಕಾಶವಿದೆ. 

ಹೀಗಾಗಿ ಆರಂಭಿಕ ಆಟಗಾರ ಮಯಾಂಕ್​ ಅಗರವಾಲ್​ ಇದೀಗ ಕರ್ನಾಟಕ ತಂಡದ ಪರ ವಿಜಯ್​ ಹಜಾರೆ ಟೂರ್ನಿಯಲ್ಲಿ ಭಾಗಿಯಾಗಲು ಸಿದ್ಧರಾಗಿದ್ದಾರೆ. ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಹಾಕಿರುವ ಕರ್ನಾಟಕ ತಂಡ ಅಕ್ಟೋಬರ್​ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚತ್ತೀಸಗಢ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಮನೀಷ್ ಪಾಂಡೆ ನೇತೃತ್ವದ ತಂಡದಲ್ಲಿ ಮಯಾಂಕ್​ ಅಬ್ಬರಿಸಲು ಸಜ್ಜಾಗಿರುವ ಕಾರಣ ತಂಡ ಈಗಾಗಲೇ ಅಭಿಷೇಕ್​ಗೆ ಕೈಬಿಟ್ಟಿದೆ. 

ಇನ್ನೊಂದೆಡೆ ತಮಿಳುನಾಡು ತಂಡದ ಪರ ಆಲ್​ರೌಂಡರ್​ ಆರ್​ ಅಶ್ವಿನ್​ ಸಹ ಸೆಮಿಫೈನಲ್​​ನಲ್ಲಿ ಭಾಗಿಯಾಗಲಿದ್ದು, ಗುಜರಾತ್​ ತಂಡದ ವಿರುದ್ಧ ತಮ್ಮ ಬೌಲಿಂಗ್​ ಕೈಚೆಳಕ ತೋರಿಸಲಿದ್ದಾರೆ. ಒಂದು ವೇಳೆ ಸೆಮೀಸ್​ನಲ್ಲಿ ಕರ್ನಾಟಕ- ತಮಿಳುನಾಡು ಗೆಲುವು ದಾಖಲು ಮಾಡಿದರೆ ಅಕ್ಟೋಬರ್​ 25ರಂದು ಫೈನಲ್​​ನಲ್ಲಿ ಮುಖಾಮುಖಿಯಾಗಲಿವೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.