ETV Bharat / bharat

ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯ: ದೆಹಲಿ, ಮಹಾರಾಷ್ಟ್ರ, ಯುಪಿ ಸರ್ಕಾರದ ಮಹತ್ವದ ನಿರ್ಧಾರ

ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಐದು ಸಾವಿರ ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಹೆಚ್ಚು ಪ್ರಕರಣ ಕಂಡು ಬರ್ತಿವೆ. ಇದರ ಮಧ್ಯೆ ಮಹಾರಾಷ್ಟ್ರ, ನವದೆಹಲಿ ಹಾಗೂ ಉತ್ತರಪ್ರದೇಶದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿವೆ.

Masks compulsory
Masks compulsory
author img

By

Published : Apr 8, 2020, 8:46 PM IST

ನವದೆಹಲಿ/ಮುಂಬೈ: ದೇಶದಲ್ಲಿ ಮಹಾಮಾರಿ ಕೊರೊನಾ ಹಾವಳಿ ಕಡಿಮೆಯಾಗುವ ಯಾವುದೇ ಲಕ್ಷಣ ಗೋಚರಿಸ್ತಿಲ್ಲ. ಲಾಕ್​ಡೌನ್​ ಆದೇಶ ಹೊರಬಿದ್ದು ಬರೋಬ್ಬರಿ 15ದಿನಗಳು ಕಳೆದಿದ್ದರೂ ದಿನದಿಂದ ದಿನಕ್ಕೆ ಹೆಚ್ಚು ಸೋಂಕಿತ ಪ್ರಕರಣ ಕಂಡುಬರುತ್ತಿವೆ. ಹೀಗಾಗಿ ಕೆಲವೊಂದು ರಾಜ್ಯ ಕಠಿಣ ನಿರ್ಧಾರ ಕೈಗೊಳ್ಳುತ್ತಿವೆ.

ಮಹಾರಾಷ್ಟ್ರ, ನವದೆಹಲಿ ಹಾಗೂ ಉತ್ತರಪ್ರದೇಶದಲ್ಲಿ ಜನರು ಮನೆಯಿಂದ ಹೊರಬರಬೇಕಾದರೆ ಇನ್ಮುಂದೆ ಕಡ್ಡಾಯವಾಗಿ ಮಾಸ್ಕ್​​ ಹಾಕಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸರ್ಕಾರ ವಾರ್ನ್​ ಮಾಡಿವೆ.

ಮಾಸ್ಕ್​ ಹಾಕಿಕೊಳ್ಳುವುದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 1100ರ ಗಡಿ ದಾಟಿದ್ದು, ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಉದ್ಧವ್ ಠಾಕ್ರೆ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಅರವಿಂದ್​ ಕೇಜ್ರಿವಾಲ್ ನೇತೃತ್ವದ ದೆಹಲಿ ಹಾಗೂ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರಪ್ರದೇಶದಲ್ಲೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.