ETV Bharat / bharat

ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ..! - ಬಿಜೆಪಿ ನಾಯಕ ದಿನೇಶ್​ ಕೋಡಾ ಹತ್ಯೆ

ಮಾವೋವಾದಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತಿದ್ದ ಎಂಬ ಆರೋಪದಡಿ ಬಿಜೆಪಿ ನಾಯಕನನ್ನು ಬಿಹಾರದ ಮುಂಗೆರ್​ ಜಿಲ್ಲೆಯಲ್ಲಿ ಕೊಲೆ ಮಾಡಲಾಗಿದೆ.

ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ..!
author img

By

Published : Sep 14, 2019, 9:03 AM IST

ಬಿಹಾರ್​/ಮುಂಗೆರ್​: ಬಿಜೆಪಿ ನಾಯಕ ದಿನೇಶ್​ ಕೋಡಾ ಅವರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಬಿಹಾರದ ಮುಂಗೆರ್​ ಜಿಲ್ಲೆಯ ಲಡಯೈತಂಡ್​ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ದಿನೇಶ್​ ಕೋಡಾ(42) ಬಿಜೆಪಿಯ ಎಸ್‌ಸಿ / ಎಸ್‌ಟಿ ಬಣದ ಜಿಲ್ಲಾ ಘಟಕದ ಮುಖ್ಯಸ್ಥರಾಗಿದ್ದು, ಗುಪ್ತ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದಿನೇಶ್​ ಸತ್ಘರ್ವಾ ಪ್ರದೇಶದ ನಿವಾಸಿಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಕೋಡಾ ಮೃತದೇಹ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಷೇಧಿತ ಮಾವೋವಾದಿ ಗುಂಪಿನ ಹೆಸರಿನಲ್ಲಿ ಪತ್ರವೊಂದು ಮೃತದೇಹದ ಪಕ್ಕದಲ್ಲಿ ದೊರೆತಿದ್ದು, ಆ ಪತ್ರದಲ್ಲಿ ಹತ್ಯೆ ಮಾಡಲಾಗಿರುವ ದಿನೇಶ್​ ಕೋಡಾ ಮಾವೋವಾದಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಬರೆಯಲಾಗಿದೆ.

ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ..!

ಹತ್ಯೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಕೋಡಾ ಹಿಂದೆ ಮಾವೋವಾದಿಯಾಗಿದ್ದು, ಈಗ ಅವೆಲ್ಲವನ್ನು ಬಿಟ್ಟಿ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Intro:Body:

for national 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.