ಹೈದರಾಬಾದ್ : ಹಣ ನೀಡಲು ನಿರಾಕರಿಸಿದ್ದಕ್ಕೆ ಟಿಆರ್ಎಸ್ ಪಕ್ಷದ ಕಾರ್ಯಕರ್ತನನ್ನು ಮಾವೋವಾದಿಗಳು ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ನಡೆದಿದೆ.
ಮಾದುರಿ ಭೀಮೇಶ್ವರ ರಾವ್ ಮೃತ ಟಿಆರ್ಎಸ್ ಕಾರ್ಯಕರ್ತ. ಶನಿವಾರ ರಾತ್ರಿ ಮುಳುಗು ಜಿಲ್ಲೆಯ ಅಲುಬಾಕದಲ್ಲಿರುವ ಭೀಮೇಶ್ವರ ರಾವ್ ಮನೆಗೆ ಶಸ್ತ್ರಸಜ್ಜಿತರಾಗಿ ನುಗ್ಗಿದ 6 ಜನ ಮಾವೋವಾದಿಗಳ ತಂಡ, ಪತ್ನಿ ಮುಂದೆಯೇ ಇರಿದು ಕೊಲೆ ಮಾಡಿದೆ.
ಗ್ರಾಮದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿರುವ ಭೀಮೇಶ್ವರ ರಾವ್ಗೆ ಹಣ ನೀಡುವಂತೆ ಮಾವೋವಾದಿಗಳು ಪೀಡಿಸುತ್ತಿದ್ದರು ಎನ್ನಲಾಗಿದೆ. ಹಣ ನೀಡಲು ಒಪ್ಪದ ಕಾರಣ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಮಾವೋವಾದಿಗಳನ್ನು ಎನ್ಕೌಂಟರ್ ಮಾಡಿದ್ದಕ್ಕೆ ಪ್ರತೀಕಾರ ತೀರಿಸಲು ಮತ್ತು ಗ್ರಾಮಸ್ಥರಲ್ಲಿ ಭಯ ಮೂಡಿಸಲು ಈ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.