ETV Bharat / bharat

ಅಂಬೇಡ್ಕರ್​ ಅವರ ಕನಸು ಈಡೇರಿಸಿರೋದು ಮೋದಿ.. ಸಿಎಂ ಯೋಗಿ

author img

By

Published : Dec 13, 2019, 11:20 PM IST

ಜಾರ್ಖಂಡ್​ನ ದಿಯೋಘರ್​ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಯೋಗಿ, ಅನೇಕರು ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಕಣಿವೆ ರಾಜ್ಯದ ಮೇಲಿದ್ದ 370ನೇ ವಿಧಿ ರದ್ದು ಮಾಡಿ ಅಂಬೇಡ್ಕರ್ ಅವರ​ ಕನಸನ್ನ ನಿಜವಾಗಿಯೂ ನನಸು ಮಾಡಿದ್ದು ಮೋದಿ ಎಂದು ಹೇಳಿದರು.

CM Yogi in Jarkhand election rally
ಸಿಎಂ ಯೋಗಿ

ಜಾರ್ಖಂಡ್​: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡುವ ಮೂಲಕ ಡಾ. ಬಿ ಆರ್​ ಅಂಬೇಡ್ಕರ್​ ಅವರ​ ಕನಸನ್ನ ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

​​ಜಾರ್ಖಂಡ್​ನ ದಿಯೋಘರ್​ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಯೋಗಿ, ಅನೇಕರು ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಕಣಿವೆ ರಾಜ್ಯದ ಮೇಲಿದ್ದ 370ನೇ ವಿಧಿ ರದ್ದು ಮಾಡಿ ಅಂಬೇಡ್ಕರ್ ಅವರ​ ಕನಸನ್ನ ನಿಜವಾಗಿಯೂ ನನಸು ಮಾಡಿದ್ದು ಮೋದಿ ಎಂದು ಹೇಳಿದರು.

370ನೇ ವಿಧಿ ರದ್ದತಿಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ದೂಷಿಸಿದ ಅವರು, ಭಾರತದ ಹಿರಿಯ ಪಕ್ಷವು ಪಾಕಿಸ್ತಾನದ ಭಾಷೆಯನ್ನು ಮಾತನಾಡುತ್ತಿದೆ. ಆ ಪಕ್ಷವು "ತನ್ನ ದೇಶಕ್ಕಿಂತ ಪಾಕಿಸ್ತಾನವನ್ನು ಹೆಚ್ಚು ಪ್ರೀತಿಸುತ್ತದೆ" ಎಂದು ಆರೋಪಿಸಿದರು.

370ನೇ ವಿಧಿಯು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಜನ್ಮ ನೀಡುತ್ತದೆ ಎಂದು ಡಾ.ಅಂಬೇಡ್ಕರ್ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ಹಲವಾರು ಹಾನಿಗಳು ಸಂಭವಿಸಿದ ಬಳಿಕ ಅವರ ಮಾತು ನಿಜವಾಯಿತು. ಆದರೆ, ವಿಧಿ ರದ್ದತಿಯ ಬಳಿಕ ಈ ಪ್ರದೇಶವು ವೇಗವಾಗಿ ಅಭಿವೃದ್ಧಿಯಾಗಲಿದೆ ಎಂದು ಮಧುಪುರ್​ನಲ್ಲಿ ನಡೆದ ಮತ್ತೊಂದು ​ರ‍್ಯಾಲಿಯಲ್ಲಿ ಯೋಗಿ ಹೇಳಿದರು.

ಪ್ರಧಾನಿ ಮೋದಿ ಅವರು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸದೆ ಸಮಾಜದ ಪ್ರತಿಯೊಂದು ವರ್ಗದವರಿಗಾಗಿ ಕೆಲಸ ಮಾಡುತ್ತಿರುವುದರಿಂದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿ ಎಂದು ಸಿಎಂ ಯೋಗಿ ಚುನಾವಣಾ ರ‍್ಯಾಲಿಯಲ್ಲಿ ಮತದಾರರಲ್ಲಿ ಮನವಿ ಮಾಡಿದರು.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.