ETV Bharat / bharat

ಮನೋಮೋಹನ್ ಸಿಂಗ್, ಚಿದಂಬರಂ ಸೇರಿ ಹಲವು ಸದಸ್ಯರು ಸಂಸತ್​ ಕಲಾಪಕ್ಕೆ ಗೈರು - ಮನೋಮೋಹನ್ ಸಿಂಗ್, ಚಿದಂಬರಂ ಅಧಿವೇಶನಕ್ಕೆ ಗೈರು

ಸೋಮವಾರದಿಂದ ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಿದ ಕಡ್ಡಾಯ ಆರೋಗ್ಯ ಪರೀಕ್ಷೆಯಲ್ಲಿ ಒಟ್ಟು 17 ಸಂಸತ್ ಸದಸ್ಯರಿಗೆ ಕೋವಿಡ್​ ಪಾಸಿಟಿವ್ ಬಂದಿದೆ. ಇದರ ಹೊರತಾಗಿಯೂ ಆರೋಗ್ಯ , ವಯಸ್ಸಿನ ಕಾರಣ ನೀಡಿ ಹಲವು ಸಂಸತ್​ ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ದಾರೆ.

skip Parliament proceedings
ಹಲವು ಸದಸ್ಯರು ಸಂಸತ್​ ಕಲಾಪಕ್ಕೆ ಗೈರು
author img

By

Published : Sep 16, 2020, 4:06 PM IST

ನವದೆಹಲಿ: ಆರೋಗ್ಯದ ಕಾರಣ ನೀಡಿ ಅಧಿವೇಶನಕ್ಕೆ ಗೈರಾಗಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ , ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಆಸ್ಕರ್ ಫರ್ನಾಂಡಿಸ್, ನವನೀತ್ ಕೃಷ್ಣನ್, ನರೇಂದ್ರ ಜಾಧವ್ ಮತ್ತು ಸುಶೀಲ್ ಗುಪ್ತಾ ರಜೆ ಕೋರಿದ್ದಾರೆ.

ರಜೆ ನೀಡಲು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸದನದ ಅನುಮತಿ ಕೋರಿದ್ದಾರೆ. ಸೋಮವಾರದಿಂದ ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಿದ ಕಡ್ಡಾಯ ಆರೋಗ್ಯ ಪರೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದ ಸಂಸದರಾದ ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗ್ಡೆ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಸೇರಿದಂತೆ ಒಟ್ಟು 17 ಸಂಸತ್ ಸದಸ್ಯರಿಗೆ ಕೋವಿಡ್​ ಪಾಸಿಟಿವ್ ಬಂದಿದೆ.

ಬಿಜೆಪಿಯ 12 ಸಂದರಿಗೆ ಕೋವಿಡ್​ ಪಾಸಿಟಿವ್ ಬಂದಿದೆ. ಇನ್ನುಳಿದಂತೆ ವೈಎಸ್​ಆರ್​ ಕಾಂಗ್ರೆಸ್​ನ ಇಬ್ಬರು, ಡಿಎಂಕೆ, ಶಿವಸೇನೆ ಮತ್ತು ರಾಷ್ಟ್ರೀಯ ಲೋಕಂತ್ರಿಕ್​​​ ಪಕ್ಷದ ತಲಾ ಒಬ್ಬರು ಸಂಸದರಿಗೆ ಕೋವಿಡ್​ ದೃಢಪಟ್ಟಿದೆ. ಕೋವಿಡ್​ ಪಾಸಿಟಿವ್ ಬಂದ ಇತರ ಸಂಸದರೆಂದರೆ, ಪ್ರತಾಪ್ ರಾವ್ ಜಾಧವ್, ಜನಾರ್ದನ್ ಸಿಂಗ್, ಸುಖ್ಬೀರ್ ಸಿಂಗ್, ಹನುಮಾನ್ ಬೆನಿವಾಲ್, ಸುಕನಾತಾ ಮಜುಂದಾರ್, ಗೊಡ್ಡೇತಿ ಮಾಧವಿ, ಬಿಡಿಯುತ್ ಬಾರನ್, ಪ್ರದಾನ್ ಬರುವಾ, ಎನ್. ರೆಡ್ಡೆಪ್ಪ, ಸೆಲ್ವಂ ಜಿ., ಪ್ರತಾಪ್ ರಾವ್ ಪಾಟೀಲ್, ಸತ್ಯ ಪಾಲ್ ಸಿಂಗ್ ಮತ್ತು ರೊಡ್ಮಲ್ ನಗರ.

ಬಿಜೆಪಿಯ ಬೆಳಗಾವಿ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ,ಅವರು ಮಾನ್ಸೂನ್​ ಅಧಿವೇಶನವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅವರು ಕೋವಿಡ್​ ಲಕ್ಷಣ ರಹಿತರಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರು ಕೊರೊನಾ ವೈರಸ್​ಗೆ ತುತ್ತಾಗಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಪನಾಜಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಏಮ್ಸ್ ವೈದ್ಯರ ತಂಡ ಅವರ ಆರೋಗ್ಯದ ಮೇಲ್ವಿಚಾರಣೆ ಮಾಡುತ್ತಿದೆ. 67 ವರ್ಷದ ಸಚಿವರ ಶ್ರೀಪಾದದ್​ ನಾಯಕ್​, ಸಂಸತ್ ಅಧಿವೇಶನಕ್ಕೆ ಹಾಜರಾಗುವುದು ಅಸಾಧ್ಯ ಎನ್ನಲಾಗಿದೆ.

ರಾಜ್ಯಸಭೆಯಲ್ಲಿ ತೃಣ ಮೂಲ ಕಾಂಗ್ರೆಸ್​ನ ಮುಖ್ಯಸ್ಥರಾದ ಶುಖೇಂಡು ಶೇಖರ್ ರಾಯ್ ಸೇರಿದಂತೆ ಏಳು ಟಿಎಂಸಿ ಸಂಸದರು ಮಾನ್ಸೂನ್ ಅಧಿವೇಶನಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶೇಖರ್​ ರಾಯ್​, ನನ್ನ ವಯಸ್ಸು 65 ವರ್ಷಕ್ಕಿಂತ ಮೇಲ್ಪಟ್ಟವರು ಹೊರಗಡೆ ಓಡಾಡದಂತೆ ಗೃಹ ಕಾರ್ಯದರ್ಶಿಯವರು ನೀಡಿದ ಆದೇಶದ ಹಿನ್ನೆಲೆ ನಾನು ಅಧಿವೇಶನಕ್ಕೆ ಹಾಜರಾಗುವುದಿಲ್ಲ. ಈ ಬಗ್ಗೆ ಸದನದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.