ಕೊಟ್ಟಾಯಂ : ಹೋಂ ಕ್ವಾರಂಟೈನ್ನಲ್ಲಿದ್ದ 41 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಕೇರಳದ ಕುಮಾರಕೋಮ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯು ರಾಷ್ಟ್ರೀಯ ಪರವಾನಗಿ ಹೊಂದಿದ್ದ ಲಾರಿಯ ಚಾಲಕನಾಗಿದ್ದ. ಮಾ.18 ರಂದು ಮುಂಬೈಗೆ ಭೇಟಿ ನೀಡಿ ಬಂದ ಬಳಿಕ ಕುಮಾರಕೋಮ್ನ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ. ಆದರೆ, ಇಂದು ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಕುಸಿದು ಬಿದ್ದು ಮನೆಯಲ್ಲೇ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ. ಈವರೆಗೂ ಕೇರಳದಲ್ಲಿ ಒಬ್ಬರು ಮಾತ್ರ ಮಹಾಮಾರಿಗೆ ಬಲಿಯಾಗಿದ್ದಾರೆ. 198 ಕೊರೊನಾ ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗಿವೆ.