ಎರ್ನಾಕುಲಂ(ಕೇರಳ): ಎರ್ನಾಕುಲಂನ ಪಚಲಂನಲ್ಲಿ ಆಟೋ ಚಾಲಕನೊಬ್ಬ ಇಬ್ಬರು ವ್ಯಕ್ತಿಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.
2 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಿಜಿನ್ ದಾಸ್(34) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾನೆ. ಪಂಗಜಕ್ಷನ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಫಿಲಿಪ್ ಎಂಬ ಆಟೋ ಚಾಲಕ ಟೀ ಅಂಗಡಿ ಮುಂದೆ ನಿಂತಿದ್ದ ರಿಜಿನ್ ದಾಸ್ ಮತ್ತು ಪಂಗಜಕ್ಷನ್ ಕಡೆಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಕೆಲ ಕ್ಷಣಗಳಲ್ಲೆ ಮತ್ತೆ ವಾಪಸ್ ಬಂದು ಮತ್ತೆ ಕೆಲವರ ಮೇಲೆ ಪೆಟ್ರೋಲ್ ಎರಚಲು ಪ್ರಯತ್ನಿಸಿದ್ದ. ಅಲ್ಲದೇ ತಡೆಯಲು ಬಂದ ಕೆಲವರ ಮೇಲೆ ಹಲ್ಲೆಗೆ ಮುಂದಾಗಿದ್ದ.
ಇದು ಪೂರ್ವಯೋಜಿತ ಕೃತ್ಯವಲ್ಲ. ಆಟೋ ಚಾಲಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.