ETV Bharat / bharat

ಅನಾರೋಗ್ಯ ಪೀಡಿತ ತಂದೆ ಭೇಟಿಗೆ CRPF ನೆರವು.. ಲಾಕ್‌ಡೌನ್‌ನಲ್ಲಿ ಆರೀಫ್‌ಗೆ ಕರುಣೆಯ ದರ್ಶನ!!

ಆರೀಫ್​ ಸೈಕಲ್​ ಪ್ರಯಾಣದ ವಿಚಾರ ತಿಳಿಯುತ್ತಿದ್ದಂತೆ ಸಿಆರ್​ಪಿಎಫ್​ ಇವರ ಸಹಾಯಕ್ಕೆ ಬಂತು. ಆಗ ಆರೀಫ್​ ಇಚ್ಛೆಯಂತೆ ಪವಾಡ ನಡೆದೇ ಹೋಯ್ತು. ಅರೆಸೈನಿಕ ಪಡೆ ಆರೀಫ್​ ಮತ್ತು ಅವನ ತಂದೆಯ ಸಹಾಯಕ್ಕೆ ನಿಂತಿತು.

Man sets out on 2100-km cycle journey to meet ailing father, CRPF lends him help
ತಂದೆಯನ್ನು ಕಾಣಲು 2100ಕಿಮೀ. ಕ್ರಮಿಸಹೊರಟವನಿಗೆ ಎದುರಾಯ್ತು ಪವಾಡ
author img

By

Published : Apr 6, 2020, 12:05 PM IST

ಜಮ್ಮು/ನವದೆಹಲಿ : ಕೊರೊನಾ ತಡೆ ಹಿನ್ನೆಲೆ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ವ್ಯಕ್ತಿಯೊಬ್ಬರು ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂದೆಯನ್ನು ಭೇಟಿಯಾಗಲು 2100 ಕಿ.ಮೀ ಸೈಕಲ್​ ತುಳಿದು ಸಾಗಲು ಹೊರಟಿದ್ದವನಿಗೆ ಸಿಆರ್​ಪಿಎಫ್​ ನೆರವಾಗಿರುವ ಘಟನೆ ನಡೆದಿದೆ.

ದೇಶದ ಆರ್ಥಿಕ ರಾಜಧಾನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಆರೀಫ್​ ಎಂಬ ವ್ಯಕ್ತಿಯ ತಂದೆಗೆ ಬಲವಾಗಿ ಲಕ್ವಾ ಹೊಡೆದಿತ್ತು. ತನ್ನ ತಂದೆಯನ್ನು ಕಾಣಲು ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಯ ಉದ್ದಕ್ಕೂ ಸಾಗಿ ತನ್ನ ಹಳ್ಳಿಗೆ ಕರೆದೊಯ್ಯುವ ಯಾವುದೇ ಸಾರಿಗೆ ವಿಧಾನವಿಲ್ಲ ಎಂದು ಆತ ತಿಳಿದಿದ್ದ. ಏನಾದರೂ ಪವಾಡವಾಗಿ ತನ್ನ ತಂದೆ ಭೇಟಿಯಾದರೆ ಸಾಕು ಎಂದು ಸೈಕಲ್ ಹತ್ತಿ ಪ್ರಯಾಣ ಶುರು ಮಾಡಿಯೇ ಬಿಟ್ಟ.

ಆರೀಫ್​ ಸೈಕಲ್​ ಪ್ರಯಾಣದ ವಿಚಾರ ತಿಳಿಯುತ್ತಿದ್ದಂತೆ ಸಿಆರ್​ಪಿಎಫ್​ ಇವರ ಸಹಾಯಕ್ಕೆ ಬಂತು. ಆಗ ಆರೀಫ್​ ಇಚ್ಛೆಯಂತೆ ಪವಾಡ ನಡೆದೇ ಹೋಯ್ತು. ಅರೆಸೈನಿಕ ಪಡೆ ಆರೀಫ್​ ಮತ್ತು ಅವನ ತಂದೆಯ ಸಹಾಯಕ್ಕೆ ನಿಂತಿತು. ಸಿಆರ್‌ಪಿಎಫ್‌ನ ಕಾಶ್ಮೀರ ಮೂಲದ 'ಮದದ್‌ಗಾರ್' ಸಹಾಯವಾಣಿ ಕಾರ್ಯರೂಪಕ್ಕೆ ಬಂದ ನಂತರ ಆರೀಫ್ ಅವರ ತಂದೆ ವಜೀರ್ ಹುಸೇನ್ ಅವರು ಭಾನುವಾರ ಪಂಜ್ರೇನ್ ಗ್ರಾಮದಿಂದ ವಿಶೇಷ ಚಾಪರ್‌ನಲ್ಲಿ ವಿಮಾನದಲ್ಲಿ ಏರಿದರು.

ಮರುದಿನ, ಆರೀಫ್​ ತಮ್ಮ ಸೈಕಲ್‌ನಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಲು ನಿರ್ಧರಿಸಿದರು. ಈ ವೇಳೆ ಗುಜರಾತ್‌ನ ವಡೋದರಾದಲ್ಲಿ ಭಾನುವಾರ ಅವರಿಗೆ ಊಟ, 2,000 ರೂ. ನಗದು, ಸ್ಯಾನಿಟೈಸರ್, ಮಾಸ್ಕ್​ ಮತ್ತು ಡ್ರೈ ಫ್ರೂಟ್ಸ್​ಗಳನ್ನು ನೀಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.