ತಿರುವನಂತಪುರಂ: ಕಟ್ಟಕಡದ ಕಲ್ಲಿಕಡ್‌ನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯ ಕಾರ್ಮಿಕನ ಕುತ್ತಿಗೆಗೆ ಹೆಬ್ಬಾವು ಸುರುಳಿಯಾಗಿ ಸುತ್ತಿಕೊಂಡಿತ್ತು. ಸ್ಥಳೀಯರ ಸಮಯಪ್ರಜ್ಞೆಯಿಂದ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಲ್ಲಿಕಡ್‌ನ ಪೆರುಮ್ಕುಲಂಗರದ ಭುವನಚಂದ್ರನ್ ನಾಯರ್ ಎಂಬವರ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡಿತ್ತು. ಭುವನಚಂದ್ರ ಕೆಲಸದಲ್ಲಿದ್ದಾಗ ಹೆಬ್ಬಾವು ಅವರ ಕುತ್ತಿಗೆಯನ್ನು ಆವರಿಸಿಕೊಂಡಿದೆ. ಇದನ್ನು ಕಂಡ ಬೇರೆ ಕಾರ್ಮಿಕರು ಕೂಡಲೇ ಹಾವಿನ ಕುತ್ತಿಗೆ ಮತ್ತು ಬಾಲವನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಇದರಿಂದ ಭುವನಚಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳಿಕ ಅರಣ್ಯಾಧಿಕಾರಿಗಳು ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.