ETV Bharat / bharat

ದೆಹಲಿಯ ಶಾಹೀನ್​​ ಬಾಗ್​​​ನಲ್ಲಿ ಫೈರಿಂಗ್​​​​: ಆರೋಪಿ ಪೊಲೀಸರ ವಶಕ್ಕೆ - ದೆಹಲಿಯ ಶಾಹೀನ್ ಬಾಗ್ ನಲ್ಲಿ ಫೈರಿಂಗ್​​

ದೆಹಲಿಯ ಶಾಹೀನ್ ಬಾಗ್​​ನಲ್ಲಿ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದದ್ದಾರೆ.

Man opens fire in Shaheen Bagh area, no casualty reported
ದೆಹಲಿಯ ಶಾಹೀನ್ ಬಾಗ್ ನಲ್ಲಿ ಫೈರಿಂಗ್​​
author img

By

Published : Feb 1, 2020, 9:36 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಮತ್ತೊಮ್ಮೆ ಗುಂಡಿನ ಸದ್ದು ಕೇಳಿಸಿದೆ. ಇಂದು ಸಂಜೆ ಕಪಿಲ್​​(23) ಎಂಬ ಯುವಕನೊಬ್ಬ ದೆಹಲಿಯ ಶಾಹೀನ್ ಬಾಗ್​​ನಲ್ಲಿ ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ.

ಈ ಬಗ್ಗೆ ಈಟಿವಿ ಭಾರತ್​​ಗೆ ಆರೋಪಿ ಕಪಿಲ್​​ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ಬಗ್ಗೆ ನಮಗೆ ಯಾವುದೇ ಮುನ್ಸೂಚನೆ ಸಿಕ್ಕಿಲ್ಲ ಎಂದಿದ್ದಾರೆ. ಕಪಿಲ್​​ ಪೂರ್ವ ದೆಹಲಿ ಭಾಗದ ದಲ್ಲಾಪುರದ ನಿವಾಸಿಯಾಗಿದ್ದು, ಬೆಳಿಗ್ಗೆ 12 ಗಂಟೆಗೆ ಮನೆಯಿಂದ ಹೊರಟಿದ್ದ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಕಪಿಲ್​​ಗೆ ಯಾವುದೇ ಕ್ರಿಮಿನಲ್​ ಹಿನ್ನೆಲೆ ಇಲ್ಲ ಎಂದು ಆತನ ಸಹೋದರ ಹೇಳಿದ್ದಾನೆ.

ಆರೋಪಿ ಕಪಿಲ್ ಪೊಲೀಸ್ ಬ್ಯಾರಿಕೇಡ್​​ಗಳ ಬಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆತನನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ. ಇನ್ನು ಘಟನೆಯಲ್ಲಿ ಯಾರಿಗೂ ಗಾಯ ಅಥವಾ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರೊಬ್ಬರ ಪ್ರಕಾರ ಈತ ಗುಂಡು ಹಾರಿಸುವಾಗ ಹಿಂದು ರಾಷ್ಟ್ರ ಜಿಂದಾಬಾದ್​ ಎಂದು ಕೂಗುತ್ತಿದ್ದ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.