ಚಕ್ಸು (ಜೈಪುರ): ತನ್ನ ಅಣತಿಯಂತೆ ನಡೆದುಕೊಳ್ಳದ್ದಕ್ಕೆ ಮುಂಗೋಪಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ತಾಯಿ(ಅತ್ತೆ)ಯನ್ನು ಕೊಲೆ ಮಾಡಿರುವ ಘಟನೆ ಇಲ್ಲಿನ ಶಿವದಾಸ್ಪುರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.
ರಾಮ್ ಕಿಶನ್ ಮಾಲಿ ಕೊಲೆ ಮಾಡಿದ ಆರೋಪಿ ತಿಳಿದು ಬಂದಿದೆ. ತನ್ನ ಪತ್ನಿ ಹಾಗೂ ಆಕೆಯ ತಾಯಿಯನ್ನು ಕೊಲೆಗೈದ ನಂತರ ಆರೋಪಿ ರಾಮ್ ಕಿಶನ್ ಸ್ವತಃ ತಮ್ಮ ಇಬ್ಬರು ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿವದಾಸ್ಪುರ್ ಪೊಲೀಸ್ ಠಾಣೆಯ ಎಸ್ಹೆಚ್ಒ ಇಂದ್ರರಾಜ್ ಮರೋಡಿಯಾ ಮಾಧ್ಯಮಗಳ ಜೊತೆ ಮಾತನಾಡುತ್ತಾ ಜೋಡಿ ಕೊಲೆ ಪ್ರಕರಣ ಬಗ್ಗೆ ಮಾಹಿತಿ ನೀಡಿದ್ದಾರೆ.
ಪತ್ನಿ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹಾಗೂ ತನ್ನ ಅಣತಿಯಂತೆ ನಡೆದುಕೊಳ್ಳದ್ದಕ್ಕೆ ಮುಂಗೋಪಿ ರಾಮ್ ಕಿಶನ್ ಇಬ್ಬರನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.