ETV Bharat / bharat

ಕೊರೊನಾ ಕಿರಿಕಿರಿ ತಾಳಲಾರದೆ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

ಕ್ವಾರಂಟೈನ್​ನಲ್ಲಿದ್ದು ಅವಧಿ ಮುಗಿದ ನಂತರ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಪಾಲನಪುರದಲ್ಲಿ ನಡೆದಿದೆ. ಪಾಲನಪುರದ ತನ್ನ ಮನೆಯ ಕೊನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
author img

By

Published : Apr 4, 2020, 2:59 PM IST

ಗಾಂಧಿನಗರ: ಕೊರೊನಾ ವೈರಸ್​ ಸೋಂಕಿನ ಶಂಕೆಯಿಂದ ಕ್ವಾರಂಟೈನ್​ ಅವಧಿ ಮುಗಿಸಿದ 42 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಪಾಲನಪುರದಲ್ಲಿ ನಡೆದಿದೆ.

ವಿನೋದಭಾಯಿ ಪುರುಷೋತ್ತಮಭಾಯಿ ಚೌರಾಸಿಯಾ ಎಂಬುವರನ್ನು ಮಾ.20 ರಿಂದ ಕ್ವಾರಂಟೈನ್​​ನಲ್ಲಿ ಇರಿಸಲಾಗಿತ್ತು. ಶುಕ್ರವಾರವೇ ಆತನ ಕ್ವಾರಂಟೈನ್​ ಅವಧಿ ಮುಗಿದು ವೈದ್ಯಕೀಯ ಪರೀಕ್ಷೆಗಳಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೆ, ಸತತ ಕುಟುಂಬದಲ್ಲಿನ ಕಲಹದಿಂದ ಈ ವ್ಯಕ್ತಿ ನೊಂದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚೌರಾಸಿಯಾ ಟ್ರಾನ್ಸಪೋರ್ಟ್​ ವ್ಯವಹಾರ ನಡೆಸುತ್ತಿದ್ದ. ಈತನ ಕುಟುಂಬ ಪಾಲನಪುರದಲ್ಲಿ ವಾಸವಿದೆ. ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾದಾಗ ಈತ ಮಾ.20 ರಂದು ಪಾಲನಪುರದ ಮನೆಗೆ ಮರಳಿದ್ದ. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಈತನನ್ನು ಕ್ವಾರಂಟೈನ್​ನಲ್ಲಿರಿಸಿದ್ದರು.

ಮನೆಯ ಕೊನೆಯ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ವಿನೋದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ ಮನೀಷಾ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾರೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.