ETV Bharat / bharat

ಅಣ್ಣನ ಹೆಂಡ್ತಿ ಜೊತೆ ಸಂಬಂಧ: ಮದುವೆಗೆ ಕುಟುಂಬಸ್ಥರ ವಿರೋಧ, ಆತ್ಮಹತ್ಯೆಗೆ ಶರಣಾದ ಜೋಡಿ! - ಆತ್ಮಹತ್ಯೆಗೆ ಶರಣಾದ ಜೋಡಿ

ಅಣ್ಣನ ಹೆಂಡತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿ ಆಕೆಯನ್ನ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಈ ವೇಳೆ ವಿರೋಧ ವ್ಯಕ್ತವಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

commits suicide
commits suicide
author img

By

Published : Jun 22, 2020, 7:56 PM IST

ಜೈಪುರ್​​(ರಾಜಸ್ಥಾನ): ಮೃತ ಅಣ್ಣನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆಯನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಕುಟುಂಬಸ್ಥರ ವಿರೋಧ ವ್ಯಕ್ತವಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ನಡೆದಿದೆ.

ಜೈಪುರ್​ನ ದುಸ್ಸಾ ಜಿಲ್ಲೆಯ ಲಾವಾನ್​ ಪೊಲೀಸ್​ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಸಹೋದರ ಕಳೆದ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದ್ದ. ಇದಾದ ಬಳಿಕ ಗಂಡನ ಮನೆಯಲ್ಲೇ ಉಳಿದುಕೊಂಡಿದ್ದ ಮಹಿಳೆ ಆತನ ಸಹೋದರನೊಂದಿಗೆ ಸಂಬಂಧವಿಟ್ಟುಕೊಂಡಿದ್ದಳಂತೆ. ಜೊತೆಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಈ ವೇಳೆ ಮನೆಯವರನ್ನ ಕೇಳಿದ್ದು, ಅದಕ್ಕೆ ವಿರೋಧ ವ್ಯಕ್ತವಾಗಿದೆ.

ಇದರಿಂದ ಮನನೊಂದ ಇಬ್ಬರು ಮನೆಯಲ್ಲಿ ರೂಂನಲ್ಲಿನ ಫ್ಯಾನ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನ 22 ವರ್ಷ ಹರ್ಕಿಶ್​ ಹಾಗೂ 25 ವರ್ಷದ ಗುನ್ನಾ ಎಂದು ಗುರುತಿಸಲಾಗಿದೆ. ಗುನ್ನಾಗೆ ಈಗಾಗಲೇ ಮಗುವಿದೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.