ETV Bharat / bharat

ಸುಮ್ನೆ ಕಿರಿಕಿರಿ ಏಕೆ? ಹೆಲ್ಮೆಟ್​ನಲ್ಲೇ ದಾಖಲೆಗಳನ್ನು ಅಂಟಿಸಿಕೊಂಡ ಬೈಕ್​ ಸವಾರ!

ಹೊಸ ಟ್ರಾಫಿಕ್​ ನಿಯಮ ಜಾರಿಗೆ ಬಂದಾಗಿನಿಂದ್ಲೂ ಟ್ರಾಫಿಕ್​ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರು ಸಾವಿರಾರು ರೂಪಾಯಿ ಹಣವನ್ನು ದಂಡದ ರೂಪದಲ್ಲಿ ತೆರುತ್ತಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಯಾವುದೇ ಕಿರಿಕಿರಿ ಆಗದಂತೆ ವಿಶೇಷ ರೀತಿಯಲ್ಲಿ ನಿಗಾ ವಹಿಸಿದ್ದಾರೆ.

ಹೆಲ್ಮೆಟ್​ನಲ್ಲೇ ಎಲ್ಲ ದಾಖಲೆ ಅಂಟಿಸಿಕೊಂಡ ಯುವಕ
author img

By

Published : Sep 10, 2019, 6:27 PM IST

ವಡೋದರಾ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ರಸ್ತೆ ನಿಯಮ ಮೀರುವ ವಾಹನ ಸವಾರರು ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದು, ತಮ್ಮ ವಾಹನ ಹೊರ ತೆಗೆದು ರಸ್ತೆ ಮೇಲೆ ಸವಾರಿ ನಡೆಸಲು ಹಿಂದೇಟು ಹಾಕ್ತಿದ್ದಾರೆ. ಈ ಮಧ್ಯೆ ಗುಜರಾತ್​ನ ವಡೋದರದ ನಿವಾಸಿ ವಿಚಿತ್ರವಾದ ಪ್ರಯೋಗದೊಂದಿಗೆ ರಸ್ತೆಗಿಳಿದಿದ್ದಾರೆ.

documents on his helmet
ಹೆಲ್ಮೆಟ್​ನಲ್ಲೇ ಎಲ್ಲ ದಾಖಲೆ ಅಂಟಿಸಿಕೊಂಡ ಯುವಕ

ರಾಯಲ್​ ಎನ್​​ಫೀಲ್ಡ್​ ಬೈಕ್​ ಹೊಂದಿರುವ ಆರ್​ ಶಾ, ರಸ್ತೆಗಿಳಿಯುವ ವೇಳೆ ತಾವು ಹಾಕಿಕೊಳ್ಳುವ ಹೆಲ್ಮೆಟ್​​​ನ ಸುತ್ತಲೂ ಡ್ರೈವಿಂಗ್​ ಲೈಸನ್ಸ್,​ಇನ್ಸೂರೆನ್ಸ್​​, ಆರ್​ಸಿ ಬುಕ್​​ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಹಚ್ಚಿಕೊಂಡಿದ್ದಾರೆ. ಬೈಕ್​ ಮೇಲೆ ಸವಾರಿ ಮಾಡುವಾಗ ಚಾಚೂ ತಪ್ಪದೇ ನಾನು ಹೆಲ್ಮೆಟ್​ ಹಾಕಿಕೊಳ್ಳುವುದರಿಂದ ಅದರ ಮೇಲೆ ಈ ಎಲ್ಲಾ ದಾಖಲಾತಿ ಅಂಟಿಸಿದ್ದೇನೆ ಎಂದು ಹೇಳಿದ್ರು.

ಇಲ್ಲಿಯವರೆಗೂ ತಾವು ಯಾವುದೇ ದಂಡ ಪಾವತಿಸಿಲ್ಲ ಎಂದು ಅವರು ತಿಳಿಸಿದ್ದು, ಹೊಸ ಕಾಯ್ದೆಯಿಂದ ನನಗೆ ಟ್ರಾಫಿಕ್​ ಪೊಲೀಸರು​ ತೊಂದರೆ ಕೊಟ್ಟಿಲ್ಲ ಎಂದು ನಿರಾಳತೆ ವ್ಯಕ್ತಪಡಿಸಿದ್ರು.

Intro:Body:

ಯಾವುದೇ ಕಿರಿಕಿರಿ ಬೇಡ... ಹೆಲ್ಮೆಟ್​ನಲ್ಲೇ ಎಲ್ಲ ದಾಖಲೆ ಅಂಟಿಸಿಕೊಂಡ ಬೈಕ್​ ಸವಾರ! 

ವಡೋದರಾ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದು, ತಮ್ಮ ವಾಹನ ಹೊರ ತೆಗೆದು ರಸ್ತೆ ಮೇಲೆ ಸವಾರಿ ನಡೆಸಲು ಹಿಂದೇಟು ಹಾಕ್ತಿದ್ದಾರೆ. ಇದರ ಮಧ್ಯೆ ಗುಜರಾತ್​ನ ವಡೋದರದ ನಿವಾಸಿವೋರ್ವ ವಿಚಿತ್ರವಾದ ಪ್ರಯೋಗದೊಂದಿಗೆ ರೋಡ್​ಗೆ ಇಳಿದಿದ್ದಾರೆ. 

ರಾಯಲ್​ ಎನ್​​ಫೀಲ್ಡ್​ ಬೈಕ್​ ಹೊಂದಿರುವ ಆರ್​ ಶಾ, ರಸ್ತೆಗಿಳಿಯುವ ವೇಳೆ ತಾವು ಹಾಕಿಕೊಳ್ಳುವ ಹೆಲ್ಮೆಟ್​​​ನ ಸುತ್ತಲೂ ಡ್ರೈವಿಂಗ್​ ಲೈಸನ್ಸ್​,ಇನ್ಸೂರೆನ್ಸ್​​,ಆರ್​ಸಿ ಬುಕ್​​ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಹಚ್ಚಿಕೊಂಡಿದ್ದಾರೆ. ಬೈಕ್​ ಮೇಲೆ ಸವಾರಿ ಮಾಡುವಾಗ ಚಾಚುತಪ್ಪದೇ ನಾನು ಹೆಲ್ಮೆಟ್​ ಹಾಕಿಕೊಳ್ಳುವುದರಿಂದ ಅದರ ಮೇಲೆ ಎಲ್ಲ ರೀತಿಯ ದಾಖಲಾತಿ ಅಂಟಿಸಿದ್ದೇನೆ ಎಂದಿದ್ದಾರೆ. 

ಇಲ್ಲಿಯವರೆಗೂ ತಾವು ಯಾವುದೇ ದಂಡ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದು, ಹೊಸ ಕಾಯ್ದೆಯಿಂದ ನನಗೆ ಟ್ರಾಫಿಕ್​ ಪೊಲೀಸ್​ ತೊಂದರೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.