ETV Bharat / bharat

ಜಿಎಸ್​ಟಿಯಿಂದ ವ್ಯಕ್ತಿ ಪರದಾಟ:35ರೂ.ಗಾಗಿ 2 ವರ್ಷ ನಿರಂತರ ಹೋರಾಟ!

author img

By

Published : May 9, 2019, 3:32 PM IST

ರಾಜಸ್ಥಾನದ ಕೋಟಾ ಮೂಲದ ಇಂಜಿನಿಯರ್​ ಸುಜೀತ್​ ಸ್ವಾಮಿ ಎಂಬುವರು ರೈಲ್ವೆ ಇಲಾಖೆಯಿಂದ 35 ರೂ ಪಡೆಯಲು 2 ವರ್ಷಗಳ ಕಾಲ ಹೋರಾಡಿ ಕೊನೆಗೂ ಗೆದ್ದಿದ್ದಾರೆ.

ಜಿಎಸ್​ಟಿ

ಜೈಪುರ: ಜಿಎಸ್​ಟಿಯಿಂದ ಬದಲಾದ ತೆರಿಗೆ ನೀತಿಗಳಿಂದ ವ್ಯಕ್ತಿಯೊಬ್ಬ ರೈಲ್ವೆ ಇಲಾಖೆಯಿಂದ ಹಣ ವಾಪಸ್​ ಪಡೆಯಲು ಎರಡು ವರ್ಷಗಳ ಕಾಲ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ.

ಕೋಟಾ ಮೂಲಕ ಎಂಜಿನಿಯರ್​ ಸುಜೀತ್​ ಸ್ವಾಮಿ ಎಂಬುವರು ರೈಲ್ವೇ ಇಲಾಖೆಯಿಂದ 35 ರೂ ಪಡೆಯಲು 2 ವರ್ಷಗಳ ಕಾಲ ಫೈಟ್‌ ಮಾಡಿದ್ದಾರೆ. ಸತತ ಹೋರಾಟದ ಫಲವಾಗಿ ಇಲಾಖೆಯು 33 ರೂಗಳನ್ನು ಅವರ ಖಾತೆಗೆ ಜಮಾ ಮಾಡಿದ್ದು, ಬಾಕಿ ಉಳಿಸಿಕೊಂಡ 2 ರೂ ನೀಡಬೇಕೆಂದೂ ಅವರು ಆಗ್ರಹಿಸಿದ್ದಾರೆ.

ಆಗಿದ್ದೇನು?

ಸುಜೀತ್​ 2017 ಏಪ್ರಿಲ್​​ನಲ್ಲಿ ಕೋಟಾದಿಂದ ನವದೆಹಲಿಗೆ ತೆರಳಲು 765 ರೂ ಪಾವತಿಸಿ ರೈಲ್ವೆ ಟಿಕೆಟ್​ ಕಾದಿರಿಸಿದ್ದರು. ಅವರು ಜುಲೈ 2 ರಂದು ಪ್ರಯಾಣ ಮಾಡಬೇಕಿತ್ತು. ಆದರೆ,ಅವರೇ ಟಿಕೆಟ್​ ರದ್ದು ಮಾಡಿದ್ದರಿಂದ 100 ರೂಗಳು ಕಡಿತವಾಗಿ 665 ರೂ ವಾಪಸ್​ ಮಾಡಲಾಗಿತ್ತು.

ವೇಯ್ಟಿಂಗ್​ ಲಿಸ್ಟ್​ನಲ್ಲಿದ್ದ ಟಿಕೆಟ್​ ಕ್ಯಾನ್ಸಲ್ ಮಾಡಿದ್ದಕ್ಕೆ 65 ರೂಗಳ ಬದಲು 100 ರೂ ಕಟ್ ಮಾಡಿದ್ದರಿಂದ ಸುಜೀತ್​ ಕಾನೂನು ಹೋರಾಟಕ್ಕೆ ಮುಂದಾದರು. ಅಂದೇ ಇಲಾಖೆಗೆ ಆರ್​ಟಿಐ ಮೂಲಕ ಪ್ರಶ್ನೆ ಕೇಳಿದ್ದರು.

35ರೂ.ಗಾಗಿ 2 ವರ್ಷ ನಿರಂತರ ಹೋರಾಟ!

ಇಂಡಿಯನ್​ ರೈಲ್ವೆ ಕ್ಯಾಟರಿಂಗ್​ ಅಂಡ್​ ಟೂರಿಸಂ ಕಾರ್ಪೊರೇಷನ್​ ಇದಕ್ಕೆ ಉತ್ತರವಾಗಿ, ಜಿಎಸ್​ಟಿ ಜಾರಿಗಿಂತ ಮುಂಚೆ ಟಿಕೆಟ್​ ಬುಕ್​ ಆಗಿದ್ದು, ಜಾರಿಯಾದ ನಂತರ ರದ್ದಾಗಿದೆ. ಈ ವೇಳೆ ಸರ್ವೀಸ್​ ಟ್ಯಾಕ್ಸ್​ ಆಗಿ ಕಡಿತ ಮಾಡಲಾದ 35 ರೂಗಳನ್ನು ಹಿಂದಿರುಗಿಸಲಾಗದು ಎಂದು ಖಡಕ್ಕಾಗಿ ಹೇಳಿತ್ತು. ಆ ನಂತರ ಜಿಎಸ್​ಟಿ ಜಾರಿಗಿಂತ ಮುನ್ನ ಟಿಕೆಟ್​ ಬುಕ್​ ಮಾಡಿದ್ದರಿಂದ ಸರ್ವೀಸ್​ ಟ್ಯಾಕ್ಸ್​ ಮೊತ್ತವನ್ನು ಹಿಂದಿರುಗಿಸುವುದಾಗಿ ಹೇಳಿತ್ತು.

2018ರಲ್ಲಿ ಈತ ಲೋಕ ಅದಾಲತ್​ಗೆ ಸಹ ದೂರು ನೀಡಿದ್ದೆ. ಇದು ತನ್ನ ವ್ಯಾಪ್ತಿಯಲ್ಲಿಲ್ಲ ಎಂದು ಅರ್ಜಿ ರದ್ದಾಗಿತ್ತು. ಅಲ್ಲದೆ, ನಾನು ಸಲ್ಲಿಸಿದ್ದ ಆರ್​ಟಿಐ ಅರ್ಜಿಯನ್ನು 10 ಬಾರಿ ಬೇರೆ ಬೇರೆ ಇಲಾಖೆಗಳಿಗೆ ರವಾನಿಸಲಾಗಿತ್ತು. ಏನೆಲ್ಲಾ ಹೋರಾಟ ನಡೆಸಿದ ನಂತರ 33 ರೂ ಗಳನ್ನು 2019ರ ಮೇ 1ರಂದು ಬ್ಯಾಂಕ್​ ಖಾತೆಗೆ ಹಾಕಲಾಗಿದೆ ಎಂದು ಸುಜೀತ್​ ಹೇಳಿಕೊಂಡಿದ್ದಾರೆ.

ನನ್ನಂತೆಯೇ 9 ಲಕ್ಷ ಪ್ರಯಾಣಿಕರು ಜಿಎಸ್​ಟಿ ಜಾರಿಗೆ ಮುನ್ನ ಟಿಕೆಟ್​ ಬುಕ್​ ಮಾಡಿ, ಜಾರಿಯಾದ ನಂತರ ಕ್ಯಾನ್ಸಲ್​ ಮಾಡಿಯೂ ಸರ್ವೀಸ್​ ಟ್ಯಾಕ್ಸ್​ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದಾರೆ. ಇದರ ಮೊತ್ತ 3.34 ಕೋಟಿ ರೂ ಎಂದು ಆರ್​ಟಿಐ ಮೂಲಕ ತಿಳಿದುಬಂದಿದೆ. ಬಹುತೇಕ ಜನರಿಗೆ ಇದು ಗೊತ್ತೇ ಇಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.