ETV Bharat / bharat

'ನನ್ನ ತಲೆಗೆ ಹೆಲ್ಮೆಟ್ ಸಿಗ್ತಿಲ್ಲ, ನಾನೇನು ಮಾಡಲಿ?' ಅಹಮದಾಬಾದ್‌ನಲ್ಲಿ ಕುತೂಹಲಕಾರಿ ಘಟನೆ! - Motor Vehicle Act

ಅಹಮದಾಬಾದ್​ನಲ್ಲಿ ಹೆಲ್ಮೆಟ್​ ಧರಿಸದೆ ಬೈಕ್​ ಓಡಿಸುತ್ತಿದ್ದ ಸವಾರನನ್ನು ಸಂಚಾರಿ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಬಯಲಿಗೆ ಬಂದ ಸತ್ಯ ಸಂಗತಿ ಕುತೂಹಲಕಾರಿಯಾಗಿದೆ.

ಚಿತ್ರ ಕೃಪೆ ಟ್ವಿಟ್ಟರ್​
author img

By

Published : Sep 17, 2019, 8:49 PM IST

ಅಹಮದಾಬಾದ್​: ನೂತನ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯು ವಾಹನ ಸವಾರರನ್ನು ಹೈರಾಣ ಮಾಡಿರುವ ಬೆನ್ನಲ್ಲೇ, ಅಹಮದಾಬಾದ್​​ ಯುವಕನೋರ್ವನ ತಲೆ ಗಾತ್ರಕ್ಕೆ ಹೊಂದಿಕೊಳ್ಳದ ಹೆಲ್ಮೆಟ್​ನಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ನಡೆದಿದೆ.

ಹೆಲ್ಮೆಟ್​ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಝಾಕಿ ಎಂಬವರನ್ನು ಸಂಚಾರಿ ಪೊಲೀಸರು ರಸ್ತೆಯಲ್ಲಿ ಅಡ್ಡ ಗಟ್ಟಿದ್ದಾರೆ. ಈ ವೇಳೆ ಶಿರಸ್ತ್ರಾಣ ಧರಿಸದೇ ಇರುವುದಕ್ಕೆ ಆತ ತನ್ನ ಅಸಹಾಯಕತೆ ತೋಡಿಕೋಂಡಿದ್ದಾನೆ. ನನ್ನ ತಲೆ ದೊಡ್ಡದು. ಅದ್ರ ಗಾತ್ರಕ್ಕೆ ಹೊಂದಾಣಿಕೆಯಾಗುವ ಹೆಲ್ಮೆಟ್ ಸಿಗುತ್ತಿಲ್ಲ. ಹೀಗಾಗಿ, ಹೆಲ್ಮೆಟ್​ ಇಲ್ಲದೆ ಸಂಚರಿಸುತ್ತಿದ್ದೇನೆ ಎಂದು ಹೇಳಿದ್ದಾನೆ.

ಪೊಲೀಸರು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಸ್ಥಳದಲ್ಲಿಯೇ ಕೆಲವು ಹೆಲ್ಮೆಟ್​ಗಳನ್ನು ಆತನ ತಲೆಗೆ ಧರಿಸಿ ಪರೀಕ್ಷಿಸಿದ್ದಾರೆ. ಆಗಲೂ ಯಾವುದೇ ಹೆಲ್ಮೆಟ್​ಗಳು ಆತನಿಗೆ ಹೊಂದಾಣಿಕೆ ಆಗಲಿಲ್ಲ. ಬಳಿಕ ಯಾವುದೇ ದಂಡ ಶುಲ್ಕ ವಿಧಿಸದೆ ಸವಾರನನ್ನು ಬಿಟ್ಟು ಕಳುಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಝಾಕಿರ್​, ನನಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ. ಅದನ್ನು ಪಾಲಿಸಬೇಕೆಂದು ಬಹುತೇಕ ಕಡೆ ಹೋಗಿದ್ದೇನೆ. ಆದ್ರೆ, ಏನ್ಮಾಡ್ಲಿ? ನನ್ನ ತಲೆ ಗಾತ್ರಕ್ಕೆ ಹೊಂದಿಕೊಳ್ಳುವಂತಹ ಯಾವುದೇ ಹೆಲ್ಮೆಟ್​ ಸಿಗ್ತಿಲ್ಲ. ಆದ್ರೆ, ಚಾಲನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಇರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

Intro:Body:

helmet story

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.