ತಿರುವನಂತಪುರಂ: ಆನ್ಲೈನ್ನಲ್ಲಿ ರಮ್ಮಿ ಆಡಿ ಬರೋಬ್ಬರಿ 22 ಲಕ್ಷ ರೂ. ಕಳೆದುಕೊಂಡಿರುವ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ವಿನಿತ್ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಡಿಸೆಂಬರ್ 31ರಂದು ಈ ಘಟನೆ ನಡೆದಿದೆ. ಈತ ಸಾಲ ಮಾಡಿ ಆನ್ಲೈನ್ನಲ್ಲಿ ರಮ್ಮಿ ಆಡಿದ್ದಾನೆ. ಈ ಆಟದ ಮೂಲಕ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಂತೆ ಪಡೆದುಕೊಂಡಿರುವ ಸಾಲ ತೀರಿಸಲು ಬೇರೆ ದಾರಿ ಕಾಣಲಿಲ್ಲ. ಪರಿಣಾಮ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನ ಸಂಬಂಧಿಕರು ತಿಳಿಸಿರುವ ಪ್ರಕಾರ, ಕಳೆದ ಕೆಲವು ತಿಂಗಳಿಂದ ಈತ ಆನ್‌ಲೈನ್ ರಮ್ಮಿ ಆಟದ ವ್ಯಸನಿಯಾಗಿದ್ದನಂತೆ. ಜತೆಗೆ ಹಲವರ ಬಳಿ ಸಾಲ ಸಹ ಪಡೆದುಕೊಂಡಿದ್ದನು ಎಂದು ತಿಳಿಸಿದ್ದಾರೆ.
ಆನ್‌ಲೈನ್ ರಮ್ಮಿ ಗೇಮ್ ನಿಷೇಧಿಸಿದ ಆಂಧ್ರಪ್ರದೇಶ:
ಕೆಲ ದಿನಗಳ ಹಿಂದೆ ಆಂಧ್ರಪ್ರದೇಶ ಸರ್ಕಾರ ಆನ್‌ಲೈನ್ ರಮ್ಮಿ ಗೇಮ್ ನಿಷೇಧಿಸಿ ಆದೇಶ ಹೊರಡಿಸಿತ್ತು.
ಇಂತಹ ಘಟನೆಗಳು ಕೇರಳ, ತಮಿಳುನಾಡು ಹಾಗೂ ಆಂಧ್ರ ಮತ್ತು ತೆಲಂಗಾಣದಲ್ಲಿ ಹೇರಳವಾಗಿ ಕಂಡು ಬರುತ್ತಿವೆ.