ನವದೆಹಲಿ: ಕೋವಿಡ್ -19ಗೆ ಸಂಬಂಧಿಸಿದ ಎಲ್ಲ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರ ಸ್ಯಾನಿಟೈಸರ್, ಸಾಬೂನು ಮತ್ತು ಮಾಸ್ಕ್ಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಸೂಲಿ ಮಾಡುವುದು ತಪ್ಪು. ಕೊರೊನಾ ಸಾಂಕ್ರಾಮಿಕ ರೋಗದ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಸಣ್ಣ ಮತ್ತು ದೊಡ್ಡ ಸಲಕರಣೆಗಳ ಮೇಲೆ ಜಿಎಸ್ಟಿ ವಿಧಿಸಬಾರದು ಎಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
-
#Covid19 के इस मुश्किल वक्त में हम लगातार सरकार से माँग कर रहे हैं कि इस महामारी के उपचार से जुड़े सभी छोटे-बड़े उपकरण GST मुक्त किए जाएँ।बीमारी और ग़रीबी से जूझती जनता से सैनीटाईज़र, साबुन, मास्क, दस्ताने आदि पर GST वसूलना ग़लत है। #GSTFreeCorona माँग पर हम डटे रहेंगे। pic.twitter.com/iXLkw7lMxM
— Rahul Gandhi (@RahulGandhi) April 20, 2020 " class="align-text-top noRightClick twitterSection" data="
">#Covid19 के इस मुश्किल वक्त में हम लगातार सरकार से माँग कर रहे हैं कि इस महामारी के उपचार से जुड़े सभी छोटे-बड़े उपकरण GST मुक्त किए जाएँ।बीमारी और ग़रीबी से जूझती जनता से सैनीटाईज़र, साबुन, मास्क, दस्ताने आदि पर GST वसूलना ग़लत है। #GSTFreeCorona माँग पर हम डटे रहेंगे। pic.twitter.com/iXLkw7lMxM
— Rahul Gandhi (@RahulGandhi) April 20, 2020#Covid19 के इस मुश्किल वक्त में हम लगातार सरकार से माँग कर रहे हैं कि इस महामारी के उपचार से जुड़े सभी छोटे-बड़े उपकरण GST मुक्त किए जाएँ।बीमारी और ग़रीबी से जूझती जनता से सैनीटाईज़र, साबुन, मास्क, दस्ताने आदि पर GST वसूलना ग़लत है। #GSTFreeCorona माँग पर हम डटे रहेंगे। pic.twitter.com/iXLkw7lMxM
— Rahul Gandhi (@RahulGandhi) April 20, 2020
ಸೋಂಕು ಮತ್ತು ಬಡತನದಿಂದ ಬಳಲುತ್ತಿರುವ ಜನರಿಂದ ಸ್ಯಾನಿಟೈಸರ್, ಸಾಬೂನು, ಮಾಸ್ಕ್, ಕೈಗವಸು ಇತ್ಯಾದಿಗಳ ಮೇಲೆ ಜಿಎಸ್ಟಿ ಸಂಗ್ರಹಿಸುವುದು ತಪ್ಪು. ಜಿಎಸ್ಟಿ ಫ್ರೀ ಕೊರೊನಾ ಎಂಬ ನಮ್ಮ ನಿಲುವಿಗೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದ್ದಾರೆ.
ಸರ್ಕಾರವು ಜಿಎಸ್ಟಿ ವಿಧಿಸುತ್ತಿರುವ ವಸ್ತುಗಳ ಪಟ್ಟಿಯನ್ನು ರಾಹುಲ್ ಒದಗಿಸಿದ್ದಾರೆ. ಅದರ ಪ್ರಕಾರ, ಸ್ಯಾನಿಟೈಸರ್, ಲಿಕ್ವಿಡ್ ಹ್ಯಾಂಡ್ ವಾಶ್ ಮತ್ತು ಆಸ್ಪತ್ರೆ ಪೀಠೋಪಕರಣಗಳಾದ ಹಾಸಿಗೆಗಳು ಮತ್ತು ಪರೀಕ್ಷಾ ಬೆಂಚ್ಗಳ ಮೇಲೆ ಶೆಕಡಾ 18 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ರಕ್ತ ಪರೀಕ್ಷೆ ಮಾಡುವ ಸ್ಟ್ರಿಪ್ಗಳು, ವೈದ್ಯಕೀಯ ದರ್ಜೆಯ ಆಮ್ಲಜನಕ ಮತ್ತು ಹೈಡ್ರೋಜನ್ ಪರಾಕ್ಸೈಡ್ ಮೇಲೆ 12 ರಷ್ಟು ಜಿಎಸ್ಟಿ ವಿಧಿಸಿದ್ರೆ, ಮಾಸ್ಕ್ಗಳು, ಜೀವ ರಕ್ಷಕ ಔಷಧಗಳು ಮತ್ತು ಕೆಲ ಲಸಿಕೆಗಳ ಮೇಲೆ 5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.