ಮಹಾರಾಷ್ಟ್ರ: ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಯ ವಿರುದ್ಧ ವಿವಿದ ಸಂಘಟನೆಗಳು ಪ್ರತಿಭಟನೆ ವೇಳೆ ಬಲವಂತವಾಗಿ ಅಂಗಡಿ ಮುಚ್ಚಿಸುವುದಕ್ಕೆ ಪಯತ್ನಿಸಿ ಮಹಿಳೆಯೊಬ್ಬರಿಂದ ಖಾರದಪುಡಿ ಎರಚಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಯವತಮಲ್ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
-
#WATCH A shopkeeper in Yavatmal uses Red Chilli powder to stop the agitators protesting against CAA, NRC and NPR from shutting her shop today during Bharat Bandh called by multiple organisations. #Maharashtra pic.twitter.com/32aE3JaReU
— ANI (@ANI) January 29, 2020 " class="align-text-top noRightClick twitterSection" data="
">#WATCH A shopkeeper in Yavatmal uses Red Chilli powder to stop the agitators protesting against CAA, NRC and NPR from shutting her shop today during Bharat Bandh called by multiple organisations. #Maharashtra pic.twitter.com/32aE3JaReU
— ANI (@ANI) January 29, 2020#WATCH A shopkeeper in Yavatmal uses Red Chilli powder to stop the agitators protesting against CAA, NRC and NPR from shutting her shop today during Bharat Bandh called by multiple organisations. #Maharashtra pic.twitter.com/32aE3JaReU
— ANI (@ANI) January 29, 2020
ವಿವಿಧ ಸಂಘಟನೆಗಳು ದೇಶದೆಲ್ಲೆಡೆ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿಸಿ ಭಾರತ್ ಬಂದ್ಗೆ ಕರೆ ನೀಡಿದ್ದವು. ಮಹಾರಾಷ್ಟ್ರದ ಯವತಮಲ್ ಎಂಬಲ್ಲೂ ಪ್ರತಿಭಟನಕಾರರು ಬಂದ್ ನಡೆಸಿದ್ದರು. ಈ ವೇಳೆ ಒತ್ತಾಯವಾಗಿ ಅಂಗಡಿ ಮುಚ್ಚುವಂತೆ ಮಹಿಳೆಯೊಬ್ಬರಿಗೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಕ್ಕೆ ಅಂಗಡಿ ಮಾಲಿಕೆ ಆಕ್ರೋಶಿತಗೊಂಡು ಅಲ್ಲಿ ನೆರೆದಿದ್ದವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ.
ಕಣ್ಣಿನ ಉರಿ ತಾಳಲಾರದೆ ಹಲವಾರು ಪ್ರತಿಭಟನಾಕಾರರು ಸ್ಥಳದಿಂದ ಜಾಗ ಖಾಲಿಮಾಡಿದ್ರೆ, ಇನ್ನುಳಿದವರು ಮಹಿಳೆಯ ಕೆಲಸಕ್ಕೆ ಆಕ್ರೋಶಿತರಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.