ETV Bharat / bharat

ಲೋಕಸಭೆಯಂತೆ ವಿಧಾನಸಭೆ ಚುನಾವಣೆಲ್ಲೂ ಕೈಗೆ ತಕ್ಕ ಪಾಠ: ಮೋದಿ ಗುಡುಗು - ಮಹಾರಾಷ್ಟ್ರ ವಿಧಾನಸಭೆ ಚುನಾವಣೆ

ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳು ಜನರ ನಾಡಿ ಮಿಡಿತವನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ, ಪ್ರಧಾನಮಂತ್ರಿ
author img

By

Published : Oct 17, 2019, 5:49 PM IST

ಸತಾರ(ಮಹಾರಾಷ್ಟ್ರ): ಲೋಕಸಭೆ ಚುನಾವಣೆಯಂತೆ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿಗೆ ಜನ ಬುದ್ದಿಕಲಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ, ಪ್ರಧಾನಮಂತ್ರಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸತಾರದಲ್ಲಿ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ರಾಜ್ಯದಲ್ಲೂ ಕಾಂಗ್ರೆಸ್ ಮತ್ತು ಎನ್​ಸಿಪಿ ಮೈತ್ರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳು ಜನರ ನಾಡಿ ಮಿಡಿತವನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಲೋಕಸಭೆ ಚುನಾವಣೆಯಲ್ಲಿ ಶಿಕ್ಷೆ ಅನುಭವಿಸಿರುವ ಈ ಪಕ್ಷಗಳಿಗೆ, ವಿಧಾನಸಭೆ ಚುನಾವಣೆಯಲ್ಲೂ ತಕ್ಕ ಶಾಸ್ತಿ ಆಗಲಿದೆ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಮೋದಿ, ವೀರ ಸಾವರ್ಕರ್​ ಅವರಂತ ನಾಯಕನನ್ನ ದೂಷಿಸಲಾಗುತ್ತಿದೆ. 370ನೇ ವಿಧಿ ರದ್ದತಿಯ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇದರಿಂದ ಸತಾರ ಜನ ಕೋಪಗೊಂಡಿದ್ದಾರೆ ಎಂದಿದ್ದಾರೆ. ದೇಶದ ಜನರ ಭಾವನೆಯನ್ನ ಅರ್ಥ ಮಾಡಿಕೊಳ್ಳುವಲ್ಲಿ ಈ ನಾಯಕರು ವಿಫಲರಾಗಿದ್ದಾರೆ ಎಂದು ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ ಎಂದಿದ್ದಾರೆ.

ಅಲ್ದೇ ಚುನಾವಣೆ ಸಮಯದಲ್ಲಿ ರಜೆ ಇದೆ ಎಂದು ಎಲ್ಲೂ ಹೋಗದೇ ಪ್ರತಿಯೊಬ್ಬರೂ ವೋಟ್​ ಮಾಡಬೇಕು. ಈ ಹಿಂದಿಗಿಂತ ದಾಖಲೆ ಮಟ್ಟದಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ ಪ್ರಧಾನಿ ಮೋದಿ

Intro:Body:

malli bear

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.