ಮಹಾರಾಷ್ಟ್ರ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇಂದು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದ ಎನ್ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
-
Maharashtra cabinet expansion: 36 leaders to take oath as ministers today. Ajit Pawar to be Deputy Chief Minister. https://t.co/PrZEPsVGfk pic.twitter.com/Qxj9q4xLCF
— ANI (@ANI) December 30, 2019 " class="align-text-top noRightClick twitterSection" data="
">Maharashtra cabinet expansion: 36 leaders to take oath as ministers today. Ajit Pawar to be Deputy Chief Minister. https://t.co/PrZEPsVGfk pic.twitter.com/Qxj9q4xLCF
— ANI (@ANI) December 30, 2019Maharashtra cabinet expansion: 36 leaders to take oath as ministers today. Ajit Pawar to be Deputy Chief Minister. https://t.co/PrZEPsVGfk pic.twitter.com/Qxj9q4xLCF
— ANI (@ANI) December 30, 2019
ಸಿಎಂ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕರಿಸಿದ 32 ದಿನಗಳ ನಂತರ ಸಂಪುಟ ವಿಸ್ತರಿಸಲು ಮುಂದಾಗಿದ್ದು, 25 ಸಂಪುಟ ದರ್ಜೆ ಮತ್ತು 10 ಮಂದಿ ರಾಜ್ಯ ಖಾತೆ ಸಚಿರು ಸೇರಿದಂತೆ 36 ಮಂದಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇನ್ನು ಉದ್ಧವ್ ಠಾಕ್ರೆ ನಂತರ, ವಿಧಾನಸಭೆಗೆ ಮೊದಲಬಾರಿಗೆ ಆಯ್ಕೆಯಾಗಿರುವ ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಎರಡು ತಿಂಗಳಲ್ಲಿ ಇದು ಎರಡನೇ ಬಾರಿ. ನವೆಂಬರ್ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇನ್ನು ಅಜಿತ್ ಪವಾರ್ಗೆ ಗೃಹ ಖಾತೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ ಮುಖ್ಯಮಂತ್ರಿಯನ್ನ ಹೊರತುಪಡಿಸಿ 6 ಜನ ಸಚಿವರನ್ನ ಒಳಗೊಂಡ ಸಚಿವ ಸಂಪುಟ ಅಸ್ಥಿತ್ವದಲ್ಲಿದೆ. 10 ಮಂದಿ ಕಾಂಗ್ರೆಸ್ಸಿಗರು ಕೂಡ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.