ETV Bharat / bharat

ಪ್ರವಾಹಕ್ಕೆ ಸಿಲುಕಿದ ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ ರೈಲು: ನೌಕಾದಳ, NDRF​ನಿಂದ ಎಲ್ಲ ಪ್ರಯಾಣಿಕರ ರಕ್ಷಣೆ

ಮುಂಬೈ- ಕೊಲ್ಹಾಪುರ್ ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ ರೈಲು ಮುಂಬೈಗೆ ತೆರಳುತ್ತಿತ್ತು. ಮುಂಬೈನಿಂದ 100 ಕಿ.ಮೀ. ದೂರದಲ್ಲಿ ಪ್ರವಾಹಕ್ಕೆ ಸಿಲುಕಿ ಮುಂದಕ್ಕೆ ಚಲಿಸದೇ ನಿಂತಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ ರೈಲು
author img

By

Published : Jul 27, 2019, 2:27 PM IST

Updated : Jul 27, 2019, 7:54 PM IST

ಮುಂಬೈ: ಮಹಾಮಳೆಗೆ ತತ್ತರಿಸಿರುವ ಮಹಾರಾಷ್ಟ್ರ, ಮುಂಬೈ ಸಮೀಪದ ಬದ್ಲಾಪುರ್- ವಂಗಾನಿ ನಿಲ್ದಾಣಗಳ ಮಧ್ಯೆದ ಪ್ರವಾಹದಲ್ಲಿ ನಿಂತಿರುವ ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ನಿಂದ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಮುಂಬೈ- ಕೊಲ್ಹಾಪುರ್ ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ ರೈಲು ಮುಂಬೈಗೆ ತೆರಳುತ್ತಿತ್ತು. ಮುಂಬೈನಿಂದ 100 ಕಿ.ಮೀ. ದೂರದಲ್ಲಿ ಪ್ರವಾಹಕ್ಕೆ ಸಿಲುಕಿ ಮುಂದಕ್ಕೆ ಚಲಿಸದೇ ನಿಂತಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು 11 ಗಂಟೆಗಳ ಕಾಲ ಪರದಾಡುವಂತಾಯಿತು.

700 ಮಂದಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಸುಮಾರು 2,000 ಪ್ರಯಾಣಿಕರು ಪ್ರವಾಹದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿವೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮಾತನಾಡಿ, ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರು ಚಿಂತಿಸುವ ಅಗತ್ಯವಿಲ್. ಎನ್‌ಡಿಆರ್‌ಎಫ್, ಸೇನೆ, ನೌಕಾಪಡೆ, ಸ್ಥಳೀಯ ಆಡಳಿತ, ಪೊಲೀಸ್ ಮತ್ತು ರೈಲ್ವೆಯ ಎಲ್ಲ ತಜ್ಞರ ತಂಡಗಳು ನಿಮ್ಮ ನಿಮ್ಮ ರಕ್ಷಣೆಗೆ ನಿರತವಾಗಿದ್ದಾರೆ ಎಂದು ವಿಶ್ವಾಸ ತುಂಬಿದರು.

Intro:Body:Conclusion:
Last Updated : Jul 27, 2019, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.