ETV Bharat / bharat

ಐಟಿ ವಂಚನೆ ಪ್ರಕರಣ...ಎ.ಆರ್​​​​​​​​. ರೆಹಮಾನ್​​​​​ಗೆ ಚೆನ್ನೈ ಹೈಕೋರ್ಟ್​ನಿಂದ ನೋಟೀಸ್​​​ - ಎಆರ್ ರೆಹಮಾನ್​​ಗೆ ನೋಟೀಸ್

ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​​ ಆದಾಯ ತೆರಿಗೆ ವಂಚನೆ ಮಾಡಿದ್ಧಾರೆ ಎಂದು ಆರೋಪಿಸಿ ಆದಾಯ ತೆರಿಗೆ ಪ್ರಧಾನ ಆಯುಕ್ತರು ಚೆನ್ನೈ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿಂತೆ ಚೆನ್ನೈ ಹೈಕೋರ್ಟ್​ ಎ.ಆರ್​. ರೆಹಮಾನ್​ಗೆ ನೋಟೀಸ್ ನೀಡಿದೆ.

A.R. Rahman
ಎ.ಆರ್​​​​​​​​. ರೆಹಮಾನ್​​​​​
author img

By

Published : Sep 12, 2020, 12:09 PM IST

ಚೆನ್ನೈ: ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ ಮಾಂತ್ರಿಕ ಎಂದೇ ಹೆಸರಾದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​​​​ಗೆ ಚೆನ್ನೈ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಆದಾಯ ತೆರಿಗೆ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿ ಮೇರೆಗೆ ಎ.ಆರ್​​. ರೆಹಮಾನ್​​ಗೆ ಈ ನೋಟೀಸ್ ಜಾರಿ ಮಾಡಲಾಗಿದೆ.

2011-12 ರಲ್ಲಿ ಎ.ಆರ್​​. ರೆಹಮಾನ್ 15.98 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದರು. 2014 ರಲ್ಲಿ ತೆರಿಗೆ ಇಲಾಖೆ ಇದನ್ನು ಅಂಗೀಕರಿಸಿತ್ತು. ಆದರೆ ಇದರಲ್ಲಿ ಫೋಟಾನ್ ಕಥಾಸ್​ ಪ್ರೊಡಕ್ಷನ್​​​​​ನಿಂದ ಪಡೆದ 54 ಲಕ್ಷ ರೂಪಾಯಿ ಹಾಗೂ ಯುಕೆ ಮೂಲಕ ಲೆಬರಾ ಮೊಬೈಲ್​​​ ಸಂಸ್ಥೆಯಿಂದ ಪಡೆದ 3.47 ಕೋಟಿ ರೂಪಾಯಿ ಬಗ್ಗೆ ವಿವರಗಳನ್ನು ಸಲ್ಲಿಸಲಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ರೆಹಮಾನ್​​​​​​​​​​​​ ಗಮನಕ್ಕೆ ತಂದಿತ್ತು. ನಂತರ ಎ.ಆರ್. ರೆಹಮಾನ್ ಮತ್ತೆ ಪರಿಷ್ಕೃತ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದರಿಂದ 2016 ರಲ್ಲಿ ಮತ್ತೆ ಇದನ್ನು ಅಂಗೀಕರಿಸಲಾಯ್ತು.

ತಮ್ಮ ಮೊಬೈಲ್ ಕಂಪನಿಗೆ ಕಾಲರ್ ಟ್ಯೂನ್​​​​​​​​​ ಕಂಪೋಸ್​ ಮಾಡಲು ಅಮೆರಿಕ ಮೂಲಕ ಲೆಬರಾ ಮೊಬೈಲ್ಸ್ ರೆಹಮಾನ್​​ಗೆ ಮೂರು ವರ್ಷಗಳ ಅವಧಿಗೆ ಅಗ್ರಿಮೆಂಟ್ ಮಾಡಿಕೊಂಡು 3.47 ಕೋಟಿ ರೂಪಾಯಿ ಸಂಭಾವನೆ ನೀಡಿತ್ತು.

ಆದರೆ ಎ.ಆರ್​. ರೆಹಮಾನ್​ ಪರ ನಿಂತ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ಐಟಿಎಟಿ) ನಿರ್ಧಾರದ ವಿರುದ್ಧ ಆದಾಯ ತೆರಿಗೆ ಪ್ರಧಾನ ಆಯುಕ್ತರು ಚೆನ್ನೈ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಎ.ಆರ್​. ರೆಹಮಾನ್ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿರುವ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ ಮಾಂತ್ರಿಕನಿಗೆ ನೋಟೀಸ್ ನೀಡಲಾಗಿದೆ. ಇದೀಗ ಮತ್ತೆ ತೆರಿಗೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಎ.ಆರ್​. ರೆಹಮಾನ್ ವಿವರಣೆ ನೀಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.