ETV Bharat / bharat

ಕುಲದೇವರನ್ನು ಮೆಚ್ಚಿಸಲು ಹೆಂಡತಿಯ ತಲೆ ಕತ್ತರಿಸಿದ ಗಂಡ..! - ದೇವರ ಕೋಣೆ

ಪತಿಮಹಾಶಯನ ಮೌಢ್ಯಕ್ಕೆ ಪತ್ನಿಯೊಬ್ಬಳು ಬಲಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕುಲದೇವರನ್ನು ಮೆಚ್ಚಿಸುವ ಸಲುವಾಗಿ ಹೆಂಡತಿಯ ತಲೆ ಕತ್ತರಿಸಿದ್ದಾನೆ ಎನ್ನಲಾಗುತ್ತಿದೆ.

Madhya Pradesh man sacrifices wife for tantric ritual
ಪತಿಮಹಾಶಯನ ಮೌಢ್ಯಕ್ಕೆ ಪತ್ನಿ ಬಲಿ
author img

By

Published : Sep 3, 2020, 6:06 PM IST

ಸಿಂಗ್ರೌಲಿ (ಮಧ್ಯಪ್ರದೇಶ) : ಮೌಢ್ಯ ತುಂಬಿಕೊಂಡಿದ್ದ ಪತಿರಾಯನೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ ಹೂತು ಹಾಕಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ಬಿಟ್ಟಿ ಬಾಯಿ ಕೊಲೆಗೀಡಾದ ಮಹಿಳೆ ಎಂದು ತಿಳಿದು ಬಂದಿದೆ. ಬ್ರಿಜೇಶ್ ಜಾಧವ್ ಕೊಲೆ ಮಾಡಿದ ಪತಿಮಹಾಶಯ.

ಪತ್ನಿಯ ದೇಹ ಬಲಿದಾನದಿಂದ ಕುಲದೇವರಿಗೆ ಒಳ್ಳೆಯದಾಗುತ್ತದೆ ಎಂಬ ಮೂಢ ನಂಭಿಕೆಯನ್ನು ತನ್ನ ತಲೆಯಲ್ಲಿ ತುಂಬಿಕೊಂಡಿದ್ದ ಪತಿಮಹಾಶಯ ಬ್ರಿಜೇಶ್ ಜಾಧವ್​, ಪತ್ನಿ ಬಿಟ್ಟಿ ಬಾಯಿಯ ತಲೆಯನ್ನೇ ಕತ್ತರಿಸಿದ್ದಾನೆ. ಕೊಲೆ ಬಳಿಕ ಕತ್ತರಿಸಿದ ತಲೆಯನ್ನು ದೇವರ ಕೋಣೆಯಲ್ಲಿಟ್ಟರೆ ಆಕೆಯ ದೇಹವನ್ನು ಮನೆಯಲ್ಲಿಯೇ ಹೂತು ಹಾಕಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ದಂಪತಿಗೆ ಸುಬೇಂದ್ರ ಕುಮಾರ್ ಕೆವಾಟ್ ಮತ್ತು ಮನೋಜ್ ಕೆವಾತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು ತಂದೆಯ ಮೌಢ್ಯ ಕೃತ್ಯವನ್ನು ಕಣ್ಣಾರೆ ಕಂಡಿದ್ದಾರೆ. ರುಂಡ - ಮುಂಡ ಬೇರ್ಪಟ್ಟ ತಾಯಿಯ ಸ್ಥಿತಿ ಕಂಡ ಮಕ್ಕಳು, ಹೆದರಿ ಸ್ಥಳದಿಂದ ಓಡಿ ಹೋಗಿದ್ದಾರೆ. ಬಳಿಕ ಈ ಬಗ್ಗೆ ಓರ್ವನು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಬ್ರಿಜೇಶ್​ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೈಧಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅರುಣ್ ಪಾಂಡೆ

ಕಳೆದ ಕೆಲವು ದಿನಗಳಿಂದ ಪೂಜೆಯಲ್ಲಿ ತೊಡಗಿದ್ದ ಬ್ರಿಜೇಶ್, ಕುಲದೇವರನ್ನು ಮೆಚ್ಚಿಸುವ ಸಲುವಾಗಿ ಈ ಕೃತ್ಯ ಮಾಡಿದ್ದಾನೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೃತ್ಯದ ವಾಸ್ತುಸ್ಥಿತಿ ನೋಡಿದ ಬೈಧಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅರುಣ್ ಪಾಂಡೆ, ಇದೊಂದು ಮೂಢನಂಬಿಕೆ ಎಂದಿದ್ದಾರೆ. ಅಲ್ಲದೆ ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.