ETV Bharat / bharat

ಧಾರ್ಮಿಕ ಸ್ವಾತಂತ್ರ್ಯ ವಿಧೇಯಕಕ್ಕೆ ಮಧ್ಯಪ್ರದೇಶ ಸಂಪುಟ ಅಸ್ತು - law against love jihad

ಲವ್​ ಜಿಹಾದ್ ವಿರುದ್ಧದ 'ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020' ಅನ್ನು ಮಧ್ಯಪ್ರದೇಶ ಸಂಪುಟ ಅಂಗೀಕರಿಸಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶದ ಬಳಿಕ ಧಾರ್ಮಿಕ ಮತಾಂತರದ ವಿರುದ್ಧದ ಕಾನೂನು ಜಾರಿಗೊಳಿಸಿದ ಬಿಜೆಪಿ ಆಡಳಿತದ ಮೂರನೇ ರಾಜ್ಯ ಮಧ್ಯಪ್ರದೇಶವಾಗಿದೆ.

Madhya Pradesh govt
ಧಾರ್ಮಿಕ ಸ್ವಾತಂತ್ರ್ಯ ವಿಧೇಯಕಕ್ಕೆ ಮಧ್ಯಪ್ರದೇಶ ಸಂಪುಟ ಅಸ್ತು
author img

By

Published : Dec 29, 2020, 2:01 PM IST

ಭೋಪಾಲ್​ (ಮಧ್ಯಪ್ರದೇಶ): ಸುಗ್ರೀವಾಜ್ಞೆ ಮೂಲಕ ಶಿವರಾಜ್​​ ಸಿಂಗ್​ ಚೌಹಾಣ್ ನೇತೃತ್ವದ ಮಧ್ಯಪ್ರದೇಶದ ಸರ್ಕಾರವು ಧಾರ್ಮಿಕ ಮತಾಂತರದ ವಿರುದ್ಧದ ವಿಧೇಯಕವನ್ನು ಅಂಗೀಕರಿಸಿದೆ. ಮಸೂದೆಯನ್ನು ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ.

ಡಿ.26 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಲವ್​ ಜಿಹಾದ್ ವಿರುದ್ಧದ 'ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020' ಅನ್ನು ಸರ್ಕಾರ ಮಂಡಿಸಿತ್ತು. ಇಂದು ಈ ಮಸೂದೆಯನ್ನು ಸಂಪುಟ ಅಂಗೀಕರಿಸಿದ್ದು, ಕಾನೂನು ಜಾರಿಯಾಗಲಿದೆ.

ಓದಿ: ತಲೈವಾಗೆ ‘ದೇವರ ಎಚ್ಚರಿಕೆಯ ಕರೆ’! ಸದ್ಯಕ್ಕೆ ಪಕ್ಷ ಸ್ಥಾಪನೆ ಮಾಡದಿರಲು ರಜನಿಕಾಂತ್ ನಿರ್ಧಾರ

ಈ ಮಸೂದೆಯಡಿಯಲ್ಲಿ ಬಲವಂತದ ಧಾರ್ಮಿಕ ಮತಾಂತರಕ್ಕೆ 1-5 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರು, ಮಹಿಳೆ ಅಥವಾ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ 2-10 ವರ್ಷಗಳ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ಹಾಕಲಾಗುತ್ತದೆ.

ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶ ಸರ್ಕಾರ ಮತ್ತು ಜೈರಾಮ್​ ಠಾಕೂರ್​​ ಹಿಮಾಚಲ ಪ್ರದೇಶ ಸರ್ಕಾರದ ನಂತರ ಲವ್​ ಜಿಹಾದ್ ವಿರುದ್ಧ ಕಾನೂನನ್ನು ಜಾರಿಗೊಳಿಸಲಿರುವ ಬಿಜೆಪಿ ಆಡಳಿತದ ಮೂರನೇ ರಾಜ್ಯ ಮಧ್ಯಪ್ರದೇಶವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.