ETV Bharat / bharat

ಭರ್ಜರಿ ಪಾರ್ಟಿ ಕೊಟ್ಟ ದಂಪತಿಗೆ ಕೊರೊನಾ ಸೋಂಕು: 3 ಸಾವಿರ ಮನೆಗಳ 26 ಸಾವಿರ ಜನರಿಗೆ ಕ್ವಾರಂಟೈನ್‌ - ಮಧ್ಯಪ್ರದೇಶದಲ್ಲಿ ಕೊರೊನಾ

ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಇದೀಗ ಹೊರಬಿದ್ದಿರುವ ಸುದ್ದಿ ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

Madhya Pradesh couple test COVID
Madhya Pradesh couple test COVID
author img

By

Published : Apr 4, 2020, 2:02 PM IST

Updated : Apr 4, 2020, 2:35 PM IST

ಮೊರೆನಾ(ಮಧ್ಯಪ್ರದೇಶ): ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹಬ್ಬುತ್ತಿದೆ. ಇದೀಗ ಹೊರಬಿದ್ದಿರುವ ಮಾಹಿತಿ ಮಧ್ಯಪ್ರದೇಶ ಜನರ ನಿದ್ದೆಗೆಡುವಂತೆ ಮಾಡಿದೆ.

ಮಾರ್ಚ್​​​ 17ರಂದು ದುಬೈನಿಂದ ವಾಪಸ್​ ಆಗಿದ್ದ ದಂಪತಿ ಮೊರೆನಾ ಎಂಬ ಪ್ರದೇಶದಲ್ಲಿ ಮಾರ್ಚ್​ 20ರಂದು ಬಂಧುಗಳು, ಸ್ನೇಹಿತರು ಹೀಗೆ ಸಾವಿರಾರು ಅತಿಥಿ ಅಭ್ಯಾಗತರಿಗೆ ಅತಿದೊಡ್ಡ ಸಂತೋಷ ಕೂಟ ಏರ್ಪಡಿಸಿದ್ದರು. ಆದ್ರೆ, ವಿದೇಶದಿಂದ ಮರಳಿದ ಈ ದಂಪತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಇದೀಗ ವೈದ್ಯಕೀಯ ವರದಿ ಬಂದಿದೆ. ಹೀಗಾಗಿ 3 ಸಾವಿರ ಮನೆಗಳಿರುವ ಮೊರೆನಾ ಪ್ರದೇಶದ ಸುಮಾರು 26 ಸಾವಿರ ಜನರು ಮನೆ ಬಿಟ್ಟು ಹೊರಬರದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಇಡೀ ಊರನ್ನೇ ಹೋಂ ಕ್ವಾರಂಟೈನ್‌ ಮಾಡಿರುವ ಜಿಲ್ಲಾಧಿಕಾರಿ ಆರ್.ಎಸ್.ಬಕ್ನಾ, ಮೂರು ಸಾವಿರ ಮನೆ ಮಂದಿಗೆ 14 ದಿನ ಹೊರಗಡೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಇವರ ಮನೆ ಪಕ್ಕದಲ್ಲಿ ವಾಸವಾಗಿದ್ದ 22 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ 10 ಮಂದಿಯಲ್ಲಿ ಕೊರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

ಮಧ್ಯಪ್ರದೇಶದಲ್ಲಿ ಈಗಾಗಲೇ 158 ಕೊರೊನಾ ಪಾಸಿಟಿವ್​ ಕೇಸ್​ ಕಂಡು ಬಂದಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.

Last Updated : Apr 4, 2020, 2:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.