ETV Bharat / bharat

ಪಂಜಾಬ್​ ಸರ್ಕಾರದ ಹೊಸ ಪ್ಲಾನ್​: ಪೊಲೀಸ್​ ಕ್ಯಾಂಟೀನ್​ನಲ್ಲಿ ಕೋವಿಡ್​ ಕಿಟ್​ ಮಾರಾಟ - corona in panjab

ಪಂಜಾಬ್​ ಸರ್ಕಾರ ಕೊರೊನಾ ತಡೆಗೆ ಹಲವು ನೂತನ ಪ್ರಯೋಗಗಳಿಗೆ ಮುಂದಾಗಿದೆ. ಇಲ್ಲಿನ ಪೊಲೀಸ್ ಕ್ಯಾಂಟೀನ್​ನಲ್ಲಿ ಕೋವಿಡ್​ ಕಿಟ್​ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ovid-19-care-kits-for-asymptomatic-patients
ಪೊಲೀಸ್​ ಕ್ಯಾಂಟೀನ್​ನಲ್ಲಿ ಕೋವಿಡ್​ ಕಿಟ್​ ಮಾರಾಟ
author img

By

Published : Sep 6, 2020, 5:24 PM IST

ಲುದಿಯಾನಾ (ಪಂಜಾಬ್​): ಕೊರೊನಾ ಸೋಂಕಿನ ಲಕ್ಷಣ ಇಲ್ಲದವರಿಗೆ ಹಾಗೂ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಲುದಿಯಾನಾ ಪೊಲೀಸರು ಕೋವಿಡ್​-19 ಕಿಟ್​​ಗಳನ್ನು ಕಡಿಮೆ ದರದಲ್ಲಿ ಪೊಲೀಸ್​ ಕ್ಯಾಂಟೀನ್​ನಲ್ಲಿಯೇ ಮಾರಾಟ ಮಾಡುತ್ತಿದ್ದಾರೆ.

ovid-19-care-kits-for-asymptomatic-patients
ಪೊಲೀಸ್​ ಕ್ಯಾಂಟೀನ್​ನಲ್ಲಿ ಕೋವಿಡ್​ ಕಿಟ್​ ಮಾರಾಟ

ಎಲ್ಲ ತೆರಿಗೆ ಹಾಗೂ ಡೆಲಿವರಿ ವೆಚ್ಚ ಸೇರಿ ಒಂದು ಕಿಟ್​ನ ಬೆಲೆ 1700 ರೂಪಾಯಿ ದರ ನಿಗದಿ ಮಾಡಲಾಗಿದೆ. ಕಿಟ್​ ಒಂದರಲ್ಲಿ ವಿಟಮಿನ್​, ಜಿಂಕ್​ ಮಾತ್ರೆ, ಪಲ್ಸ್​ ಆಕ್ಸಿಮೀಟರ್​ ಸೇರಿದಂತೆ ಕೊರೊನಾ ಸಂಬಂಧಿಸಿದ 18 ವಸ್ತುಗಳಿವೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ​ ಆರ್​.ಅಗರವಾಲ್​ ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಯಲು ಹಾಗೂ ಕೋವಿಡ್​-19 ಪರೀಕ್ಷೆಗೆ ಒಳಗಾಗುವಂತೆ ಉತ್ತೇಜಿಸಲು ಪಂಜಾಬ್​ ಸರ್ಕಾರ ಸರ್ಕಾರಿ ಆಸ್ಪತ್ರೆ ಮತ್ತು ಮೊಬೈಲ್​ ವ್ಯಾನ್​ಗಳಲ್ಲಿ ಉಚಿತ ವಾಕ್​ ಇನ್​ ಪರೀಕ್ಷೆಗೆ ಅವಕಾಶ ನೀಡಿದೆ. ಖಾಸಗಿ ವೈದ್ಯರು ಮತ್ತು ಆಸ್ಪತ್ರೆಗಳು 250 ರೂಪಾಯಿ ಮೀರದಂತೆ ಕಡಿಮೆ ವೆಚ್ಚದಲ್ಲಿ ಇದೇ ರೀತಿಯ ಪರೀಕ್ಷೆಗಳಿಕೆ ಸರ್ಕಾರ ಅವಕಾಶ ನೀಡಿದೆ ಎಂದರು.

ಕೊರೊನಾ ಪರೀಕ್ಷೆಯ ವರದಿಯು ಬೇಗನೆ ಬೇಕು ಎನ್ನುವವರು ರ‍್ಯಾಪಿಡ್​ ಆಂಟಿಜಿನ್ ಪರೀಕ್ಷೆ ಆರಿಸಿಕೊಳ್ಳಬಹುದು. ಇದೇ ರೀತಿಯ ಆರ್​ಟಿ ಪಿಸಿಆರ್​ ಪರೀಕ್ಷೆಯು ಸಹ ಲಭ್ಯವಿದೆ. ಇಂತಹ ರ‍್ಯಾಪಿಡ್​ ಆಂಟಿಜಿನ್ ಪರೀಕ್ಷೆಗಳ ಮಾದರಿಯನ್ನು ಇನ್ನಷ್ಟು ಹೆಚ್ಚಿಸಲು ರಾಜ್ಯವು ಸಂಶೋಧನೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.