ETV Bharat / bharat

ಲಖನೌ ವಿಶ್ವವಿದ್ಯಾಲಯದ ಆನ್​ಲೈನ್ ಶಿಕ್ಷಣ ಪೋರ್ಟಲ್ ''ಸ್ಲೇಟ್''​​ಗೆ ಕಾಪಿರೈಟ್ ಹಕ್ಕು

author img

By

Published : Oct 26, 2020, 1:35 PM IST

ಆನ್​ಲೈನ್ ಮಾದರಿಯ ಬೋಧನಾ ವ್ಯವಸ್ಥೆ ಲಾಕ್​ಡೌನ್ ವೇಳೆ ಪರಿಹಾರವಾಗಿದ್ದು, ಇದು ಸಂಪೂರ್ಣ ಪರಿಹಾರ ನೀಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ..

Lucknow University
ಲಖನೌ ವಿಶ್ವವಿದ್ಯಾಲಯ

ಲಖನೌ (ಉತ್ತರ ಪ್ರದೇಶ): ಆನ್​ಲೈನ್ ಶಿಕ್ಷಣಕ್ಕಾಗಿ ಆರಂಭಿಸಿರುವ ಮೊದಲ ಪೋರ್ಟಲ್​ ಸ್ಲೇಟ್​ (SLATE)ಗಾಗಿ ಮೊದಲ ಕಾಪಿರೈಟ್ ಹಾಗೂ ಟ್ರೇಡ್​ಮಾರ್ಕ್​ ಅನ್ನು ಲಖನೌ ವಿಶ್ವವಿದ್ಯಾಲಯ ಪಡೆದುಕೊಂಡಿದೆ.

ಕೊರೊನಾ ನಂತರದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲಾಗದೇ ಮನೆಯಲ್ಲಿಯೇ ಉಳಿಯುವಂತಾದಾಗ ಲಖನೌ ವಿಶ್ವವಿದ್ಯಾಲಯವು ಹೊಸದೊಂದು ಆನ್​ಲೈನ್ ಶಿಕ್ಷಣ ನೀಡುವ ಪೋರ್ಟಲ್ ಆರಂಭಿಸಿದ್ದು, ಈ ಪೋರ್ಟಲ್​ಗೆ ಕಾಪಿರೈಟ್ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ.

ವಿಶ್ವವಿದ್ಯಾಲಯ ನೂರು ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಲಖನೌ ವಿಶ್ವವಿದ್ಯಾಲಯದ ಹೆಸರಿನಲ್ಲಿ ಕಾಪಿರೈಟ್ ನೋಂದಣಿಯಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಎ.ಕೆ.ರಾಯ್ ಸಂತಸ ವ್ಯಕ್ತಪಡಿಸಿದ್ದಾರೆ.

ಆನ್​ಲೈನ್ ಮಾದರಿಯ ಬೋಧನಾ ವ್ಯವಸ್ಥೆ ಲಾಕ್​ಡೌನ್ ವೇಳೆ ಪರಿಹಾರವಾಗಿದ್ದು, ಇದು ಸಂಪೂರ್ಣ ಪರಿಹಾರ ನೀಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಭವಿಷ್ಯದಲ್ಲೂ ಕೂಡ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಈ ಮೂಲಕ ದೂರದ ಸ್ಥಳಗಳಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದು ರಾಯ್ ವಿಶ್ವಾಸ ವ್ಯಕ್ತಪಡಿಸಿದ್ದು, ಸ್ಲೇಟ್​ ಅನ್ನು ಅಳವಡಿಸಿಕೊಳ್ಳಬೇಕಾದರೆ ಯಾವುದೇ ವಿಶ್ವವಿದ್ಯಾಲಯ ನಮ್ಮ ಅನುಮತಿ ಪಡೆಯಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.