ETV Bharat / bharat

ಲಡಾಖ್​ನಲ್ಲಿ ಗಡಿ ರಕ್ಷಣೆ ಹೇಗಿರುತ್ತದೆ? ಲೆಫ್ಟಿನೆಂಟ್ ಜನರಲ್ ಹೂಡಾ ವಿವರಣೆ - ಲಡಾಖ್​

2016 ರಲ್ಲಿ ಸರ್ಜಿಕಲ್‌ ಸ್ಟ್ರೈಕ್​ ಅನ್ನು ಮುನ್ನಡೆದ ವೀರ ಯೋಧ, ಉತ್ತರ ಕಮಾಂಡ್‌ನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಎಸ್ ಹೂಡಾ ಲೇಹ್​, ಲಡಾಖ್​ನಲ್ಲಿ ಭಾರತದ ಯೋಧರು ಯಾವ ರೀತಿ ಗಡಿ ರಕ್ಷಣೆ ಮಾಡುತ್ತಾರೆ. ಅವರಿಗೆ ಆಹಾರದ ಸರಬರಾಜು ಹೇಗಾಗುತ್ತದೆ ಎಂಬ ಬಗ್ಗೆ ಹೇಳಿದ್ದಾರೆ.

ladakh
ಲಡಾಖ್​
author img

By

Published : Aug 29, 2020, 10:01 AM IST

ಪೂರ್ವ ಲಡಾಖ್​ನಲ್ಲಿ 100 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಪ್ರಕ್ಷುಬ್ಧ ವಾತಾವರಣದ ಬಳಿಕವೂ ಚೀನಾದ ಸೇನೆಯು ಯಥಾಸ್ಥಿತಿ ಪುನಃಸ್ಥಾಪನೆಗಾಗಿ ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಸ್ಸು ಮಾಡುವ ಯಾವುದೇ ಲಕ್ಷಣ ತೋರಿಸುತ್ತಿಲ್ಲ ಎಂಬುದು ಹೆಚ್ಚು ಸ್ಪಷ್ಟವಾಗುತ್ತಿದೆ. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಯಾವುದೇ ಸಂಭವನೀಯತೆಗಳನ್ನು ಎದುರಿಸಲು ದೇಶದ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಮತ್ತು ದೀರ್ಘಾವಧಿಯವರೆಗೆ ಅಂದರೆ ಕಠಿಣ ಚಳಿಗಾಲದ ತಿಂಗಳುಗಳುಲ್ಲೂ ಗಡಿ ರಕ್ಷಣೆಗೆ ಸನ್ನದ್ಧವಾಗಿದ್ದೇವೆ ಎಂದು ರಕ್ಷಣಾ ಇಲಾಖೆ ಮುಖ್ಯಸ್ಥರು ಸಂಸತ್ತಿನ ಸಾರ್ವಜನಿಕ ಖಾತೆಗಳ ಸಮಿತಿಗೆ ತಿಳಿಸಿದ ಹೇಳಿಕೆಯಲ್ಲಿ ಅಲ್ಲಿನ ಪರಿಸ್ಥಿತಿಯ ವಾಸ್ತವತೆಯು ಸ್ಪಷ್ಟವಾಗಿದೆ.

ಲಡಾಖ್‌ನಲ್ಲಿನ ಚಳಿಗಾಲದಲ್ಲಿಯೂ ಗಡಿ ರಕ್ಷಣೆಗೆ ಸನ್ನದ್ಧವಾಗಿದ್ದೇವೆ ಎಂದು ರಕ್ಷಣಾ ಮುಖ್ಯಸ್ಥರ ಉಲ್ಲೇಖವು ನಮ್ಮ ಪಟ್ಟಣಗಳು ​​ಮತ್ತು ನಗರಗಳಲ್ಲಿ ನಾವು ಉಸಿರಾಡುವ ಅರ್ಧದಷ್ಟು ಆಮ್ಲಜನಕ ಪ್ರಮಾಣ ಇರುವ ಎತ್ತರದ ಘನೀಕರಿಸುವ ಪರಿಸ್ಥಿತಿಗಳಲ್ಲಿ ನಮ್ಮ ಸೈನಿಕರು ಹೋರಾಡುವ ಚಿತ್ರಣವನ್ನು ನಮ್ಮ ಕಣ್ಣ ಮುಂದೆ ತಂದಿಡುತ್ತದೆ. ಅಂತಹ ಅತ್ಯಂತ ಕಠಿಣ ಪ್ರದೇಶದಲ್ಲಿ ಎಲ್ಲವೂ ಹೆಪ್ಪುಗಟ್ಟಿರುವುದರಿಂದ ನೀರಿನಂತಹ ಮೂಲಭೂತ ಅವಶ್ಯಕತೆ ಕೂಡ ಪಡೆಯುವುದು ಕಷ್ಟ ಸಾಧ್ಯ. ಪ್ರತಿ ಚಳಿಗಾಲದಲ್ಲಿ ಐದರಿಂದ ಆರು ತಿಂಗಳವರೆಗೆ, ರೋಹ್ಟಾಂಗ್ ಮತ್ತು ಜೊಜಿ ಲಾ ಮೂಲಕ ಲಡಾಖ್‌ಗೆ ಹೋಗುವ ಎರಡೂ ರಸ್ತೆಗಳಲ್ಲಿ ಸಂಪೂರ್ಣ ಹಿಮಪಾತವಾಗುವುದರಿಂದ ಲಡಾಖ್ ಪ್ರದೇಶಕ್ಕೆ ದೇಶದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಳ್ಳಲಿದೆ.

ಚಳಿಗಾಲವು ಸೈನಿಕರಿಗೆ ಹೆಚ್ಚು ಸಂಕಷ್ಟ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ, ಮಿಲಿಟರಿ ಯೋಜಕರಿಗೆ ನಿಜವಾದ ಸವಾಲು ಎಂದರೆ 'ರಸ್ತೆ ಮುಚ್ಚಿದ' ಲಡಾಖ್‌ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಡಿತವಾಗುವ ಸಂದರ್ಭದಲ್ಲಿ ಲಡಾಖ್​ನಲ್ಲಿನ ಸೈನಿಕರು ತಮಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಸಂಪೂರ್ಣವಾಗಿ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಇದು ಪ್ರತಿವರ್ಷ ಸೇನೆಯು ಕೈಗೊಳ್ಳುವ ಅತಿದೊಡ್ಡ ಲಾಜಿಸ್ಟಿಕ್ಸ್ ತಾಲೀಮುಗಳಲ್ಲಿ ಒಂದಾಗಿದೆ. ಇದನ್ನು ‘ಅಡ್ವಾನ್ಸ್ ವಿಂಟರ್ ಸ್ಟಾಕಿಂಗ್’ (ಎಡಬ್ಲ್ಯೂಎಸ್) ಎಂದು ಕರೆಯಲಾಗುತ್ತದೆ. ಲಡಾಖ್ ರಸ್ತೆಗಳ ಸಂಪರ್ಕ ಕಡಿತಗೊಂಡಾಗ ಆರು ತಿಂಗಳ ಅವಧಿಗೆ ಸೈನಿಕರಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವಿನ ಖರೀದಿ ಮತ್ತು ಸಾಗಣೆಯನ್ನು ಇದು ಒಳಗೊಂಡಿರುತ್ತದೆ.

ಭೀಕರ ಚಳಿಯ ಲಡಾಖ್‌ ಪರಿಸ್ಥಿತಿಯಲ್ಲಿ ಸೈನಿಕರ ಅಗತ್ಯಕ್ಕೆ ತಕ್ಕಂತೆ ಸಿದ್ಧತೆಗಳು ತಿಂಗಳ ಮುಂಚಿತವಾಗಿಯೇ ಪ್ರಾರಂಭವಾಗುತ್ತವೆ, ಹಲ್ಲುಜ್ಜುವ ಬ್ರಶ್​ನಿಂದ ಬಟ್ಟೆ, ಟಿನ್ ಮಾಡಿದ ಆಹಾರ, ಪಡಿತರ, ಇಂಧನ, ಔಷಧಿಗಳು, ಮದ್ದುಗುಂಡು, ಸಿಮೆಂಟ್, ವಸತಿ ಸೌಕರ್ಯಗಳು ಇತ್ಯಾದಿಗಳವರೆಗೆ ಎಲ್ಲಾ ಸರಕುಗಳಿಗೆ ವಿವರವಾದ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಗಡಿ ರಸ್ತೆಗಳ ಸಂಘಟನೆಗಳು ಲಡಾಖ್‌ಗೆ ಹೋಗುವ ಎರಡು ರಸ್ತೆಗಳಲ್ಲಿ ಹಿಮವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿರುತ್ತವೆ. ಈ ಸಂದರ್ಭ ಪಠಾಣ್‌ಕೋಟ್ ಮತ್ತು ಜಮ್ಮುವಿನ ಸುತ್ತಮುತ್ತಲಿನ ಡಿಪೋಗಳಿಗೆ ಅಗತ್ಯ ವಸ್ತುಗಳು ಬರಲು ಪ್ರಾರಂಭಿಸುತ್ತವೆ. ಲಡಾಖ್​ಗೆ ತೆರಳುವ ರಸ್ತೆ ಮುಕ್ತವೆಂದು ಘೋಷಿಸಿದ ತಕ್ಷಣ (ಮೇ ಆಸುಪಾಸಿನಲ್ಲಿ), ಮಳಿಗೆಗಳಿಂದ ಅಗತ್ಯ ಸರಕುಗಳನ್ನು ತುಂಬಿದ ಮೊದಲ ವಾಹನ ಲಡಾಖ್‌ಗೆ ಹೊರಡುತ್ತದೆ.

ಲೇಹ್​ಗೆ ತೆರಳುವ ಮತ್ತು ವಾಪಸ್‌ ಆಗುವ ಪ್ರಯಾಣವು ಝೋಗಿ ಲಾ ರಸ್ತೆ ಮೂಲಕ ಸುಮಾರು 10 ದಿನಗಳು ಮತ್ತು ರೋಹ್ಟಾಂಗ್ ಮಾರ್ಗದ ಮೂಲಕ 14 ದಿನಗಳನ್ನು ತೆಗೆದುಕೊಳ್ಳುತ್ತದೆ. ರಾತ್ರಿಯಿಡೀ ಚಾಲಕರು ವಿಶ್ರಾಂತಿ ಪಡೆಯಲು ಎರಡು ಮಾರ್ಗಗಳಲ್ಲಿ ಸಾರಿಗೆ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಎರಡು ವಾರಗಳ ಈ ಪ್ರಯಾಣದ ಸಮಯದಲ್ಲಿ, ಚಾಲಕನು ಪ್ರತಿ ರಾತ್ರಿ ಬೇರೆ ಸ್ಥಳದಲ್ಲಿ ಮಲಗುತ್ತಾನೆ ಮತ್ತು ಪ್ರವಾಸವನ್ನು ಪೂರ್ಣಗೊಳಿಸಿದ ನಂತರ, ಮತ್ತೊಂದು ಟ್ರಿಪ್ ಅನ್ನು ಮರು ಪ್ರಾರಂಭಿಸುವ ಮೊದಲು ಎರಡು ದಿನಗಳ ವಿಶ್ರಾಂತಿ ಪಡೆಯುತ್ತಾನೆ. ಅಂದಿನಿಂದ ಮುಂದಿನ ಆರು ತಿಂಗಳುಗಳವರೆಗೆ ಇದು ಅವರ ದಿನಚರಿಯಾಗಲಿದೆ. ಕಷ್ಟಕರವಾದ ಪರ್ವತದ ರಸ್ತೆಗಳಲ್ಲಿ ಒಂದು ಋತುವಿನಲ್ಲಿ ಸುಮಾರು ಹತ್ತು ಸಾವಿರ ಕಿಲೋಮೀಟರ್ ನಷ್ಟು ವಾಹನ ಸಂಚಾರ ಆಗುತ್ತದೆ. ಮಿಲಿಟರಿ ಸಾರಿಗೆಯನ್ನು ಬಾಡಿಗೆ ಸಿವಿಲ್ ಟ್ರಕ್‌ಗಳು ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಇಂಧನ ಟ್ಯಾಂಕರ್‌ಗಳು ಪೂರೈಸುತ್ತವೆ.

ಲಡಾಖ್‌ಗೆ ಸಾಮಗ್ರಿಗಳ ಆಗಮನದ ಮೂಲಕ ಲಾಜಿಸ್ಟಿಕ್ಸ್ ಸವಾಲುಗಳು ಕೊನೆಗೊಳ್ಳುವುದಿಲ್ಲ. ಫಾರ್ವರ್ಡ್ ಪೋಸ್ಟ್‌ಗಳಿಗೆ ಈ ವಸ್ತುಗಳನ್ನು ತಲುಪಿಸುವ ಅತ್ಯಂತ ಹೆಚ್ಚು ಕಠಿಣ ಕೆಲಸ ಇನ್ನೂ ಮುಂದಿದೆ. ಕಾರ್ಗಿಲ್ ಸೆಕ್ಟರ್ ಮತ್ತು ಸಿಯಾಚಿನ್‌ನಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಹೆಚ್ಚಿನ ಪೋಸ್ಟ್‌ಗಳು ಚಲಿಸಬಲ್ಲ ರಸ್ತೆಗಳಿಂದ ಸಂಪರ್ಕ ಹೊಂದಿಲ್ಲ. ಬೃಹತ್ ವಸ್ತುಗಳನ್ನು ಸಣ್ಣ ಪ್ಯಾಕೇಜ್‌ಗಳಾಗಿ ವಿಂಗಡಿಸಬೇಕು ಮತ್ತು ಪೋಸ್ಟ್‌ಗಳಿಗೆ ಸಾಗಿಸಲು ಇಂಧನವನ್ನು 20 ಲೀಟರ್ ಜೆರಿಕನ್‌ಗಳಾಗಿ ವಿಂಗಡಿಸಬೇಕು.

ಸೇನೆಗಾಗಿ ಮೀಸಲಾದ ಸಾಮಾಗ್ರಿಗಳು ಅಂತಿಮವಾಗಿ ಮೂಲ ಸ್ಥಾನಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಾವಿರಾರು ನಾಗರಿಕ ಪೋರ್ಟರ್‌ಗಳು ಮತ್ತು ಕುದುರೆಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಈ ನಾಗರಿಕ ಪೋರ್ಟರ್​ಗಳು ನಮ್ಮ ಮುಂದಿರುವ ಸೇನಾಪಡೆಗಳಿಗೆ ಜೀವಸೆಲೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಮಿಲಿಟರಿಯ ಹೇಸರಗತ್ತೆಗಳನ್ನು ಸಹ ಸರಕು ಸಾಗಣೆ ಸೇವೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಪ್ರಾಣಿ ಸಾರಿಗೆ ಚಾಲಕರು (animal transport drivers) ಎಂದು ಅವರನ್ನು ಕರೆಯುತ್ತಾರೆ. ವಿಶ್ವದ ಕೆಲವೇ ಕೆಲವು ಕಠಿಣ ಭೂಪ್ರದೇಶಗಳಲ್ಲಿ ಒಂದಾದ ಲಡಾಖ್‌ ಪ್ರದೇಶಕ್ಕೆ ತಲುಪಲು ಈ ಪ್ರಾಣಿ ಸಾರಿಗೆಗಳು ಒಂದು ಋತುವಿನಲ್ಲಿ ವಾಡಿಕೆಯಂತೆ 1000 ಕಿ.ಮೀ. ನಡಿಗೆಯಲ್ಲಿ ತೆರಳುತ್ತವೆ.

ಚಳಿಗಾಲದಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಮಾಡಲಾಗದ ಕಾರಣ ಬೇಸಿಗೆ ಕಾಲದಲ್ಲಿ ಸೈನಿಕರಿಗೆ ಆವಾಸಸ್ಥಾನವನ್ನು ನಿರ್ಮಿಸಲು ಸಮಯ ಬಳಸಲಾಗುತ್ತದೆ. ಚೀನಾದ ವಿಸ್ತರಣವಾದ ತಗಾದೆಯಿಂದ ಲಡಾಖ್‌ಗೆ ಈ ವರ್ಷ ಹೆಚ್ಚುವರಿ ಸೈನ್ಯದ ಸೇರ್ಪಡೆ ಕಾರಣದಿಂದಾಗಿ ಈ ಋತು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನದಿಂದ ರಕ್ಷಿಸಬಲ್ಲ ಪೂರ್ವನಿರ್ಮಿತ ಆಶ್ರಯಗಳನ್ನು ಸಂಗ್ರಹಿಸಿ, ಸಾಗಿಸಿ, ದಾಖಲೆಯ ಸಮಯದಲ್ಲಿ ಅವುಗಳನ್ನ ನಿರ್ಮಿಸಬೇಕಾಗುತ್ತದೆ.

ಇದು ಕೇವಲ ವಸ್ತು ಮಾತ್ರವಲ್ಲ, ಸೈನಿಕರನ್ನು ಸಹ ಸ್ಥಳಾಂತರಿಸಬೇಕಾಗಿದೆ. ಬೇಸಿಗೆ ಕಾಲದಲ್ಲಿ ಸುಮಾರು 2,00,000 ಸೈನಿಕರು ಲಡಾಖ್‌ನಿಂದ ಹೊರಹೋಗುವುದನ್ನು ನೋಡಬಹುದು. ರಜೆ, ಪೋಸ್ಟಿಂಗ್ ಮತ್ತು ಘಟಕಗಳ ವಹಿವಾಟಿಗಾಗಿ ಇದೇ ಪ್ರಮಾಣದ ಜನರು ಚಲಿಸುತ್ತಿದ್ದಾರೆ. ವಿಮಾನದ ಸಂಚಾರದ ಮೂಲಕ ಸೈನಿಕರನ್ನು ತಲುಪಲು ದೆಹಲಿ ಮತ್ತು ಚಂಡೀಗಢದಲ್ಲಿ ಸಾರಿಗೆ ಶಿಬಿರಗಳನ್ನು ಸಕ್ರಿಯಗೊಳಿಸಲಾಗಿದೆ.

ಸೇನೆಯ ಸಂಚಾರ ವಿಷಯದಲ್ಲಿ ಭಾರತೀಯ ವಾಯುಪಡೆಯ ಪಾತ್ರ ಅಮೂಲ್ಯವಾದುದು. ಚಂಡೀಗಢ ವಾಯುನೆಲೆ ಬೆಳಗಿನ ಜಾವದಿಂದ ಹಿಡಿದು ಇಡೀ ದಿನ ಚಟುವಟಿಕೆಯಿಂದ ಕೂಡಿರುತ್ತದೆ. ಮುಂಜಾನೆ ಆಗುತ್ತಿದ್ದಂತೆ ಲಡಾಖ್‌ಗೆ ಸಾರಿಗೆ ವಿಮಾನದ ಮೊದಲ ಪ್ರಯಾಣ ಶುರು. ಅಗತ್ಯ ಸಾಮಾಗ್ರಿ ಮತ್ತು ರಜೆಯಿಂದ ಹಿಂದಿರುಗಿದ ಸೈನಿಕರನ್ನು ಕರೆದುಕೊಂಡು ವಿಮಾನಗಳು ಲಡಾಖ್​ನತ್ತ ತೆರಳುತ್ತವೆ. ಲೇಹ್ ಏರ್‌ಫೀಲ್ಡ್ ಮತ್ತು ಸಿಯಾಚಿನ್ ಬೇಸ್ ಕ್ಯಾಂಪ್‌ನಿಂದ, ಎಂಐ -17, ಧ್ರುವ್, ಮತ್ತು ಚೀತಾ ಹೆಲಿಕಾಪ್ಟರ್‌ಗಳು ಸಾಮಾಗ್ರಿಗಳನ್ನು ಸಿಯಾಚಿನ್ ವಲಯದ ದೂರದ ಪೋಸ್ಟ್‌ಗಳಿಗೆ ಸಾಗಿಸಲಿದ್ದು, ವಿಶ್ವದ ಅತ್ಯಂತ ಕಠಿಣ ವಾಯು ಸಂಚಾರ ಪರಿಸ್ಥಿತಿಗಳನ್ನು ಎದುರಿಸುತ್ತವೆ. ವಾಯುಪಡೆಯ ಲಾಜಿಸ್ಟಿಕ್ಸ್ ಬೆಂಬಲವು ವರ್ಷದುದ್ದಕ್ಕೂ ಮುಂದುವರಿಯುತ್ತದೆ ಮತ್ತು ಚಳಿಗಾಲದಲ್ಲಿ ಲಡಾಖ್​ಅನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಕೊಂಡಿಯಾಗಿದೆ.

AWS (ಏರ್‌ ಕ್ರಾಫ್ಟ್‌ ವಾರ್ನಿಂಗ್‌ ಸರ್ವಿಸ್‌) ವಾಯುಪಡೆಗೆ ಅತ್ಯಂತ ಅಗತ್ಯವಾಗಿ ಬೇಕಾದ ಉತ್ತಮವಾದ ತಾಲೀಮಾಗಿದ್ದು, ನವೆಂಬರ್ ವೇಳೆಗೆ ಮಾತ್ರ ಪೂರ್ಣಗೊಳ್ಳುತ್ತದೆ. ಈ ಚಳಿಗಾಲದಲ್ಲಿ ಸಾವಿರಾರು ಹೆಚ್ಚುವರಿ ಸೈನಿಕರು ಉಳಿದುಕೊಳ್ಳಲು ತಯಾರಿ ನಡೆಸುತ್ತಿರುವುದರಿಂದ, ಉತ್ತರದ ಕಮಾಂಡ್ ಮತ್ತು ಲೇಹ್‌ನ ಲಾಜಿಸ್ಟಿಕ್ಸ್ ಅಧಿಕಾರಿಗಳು ಈ ಸವಾಲಿಗೆ ಸಿದ್ಧರಾಗಬೇಕಾಗುತ್ತದೆ. ಅವರು ಅದನ್ನ ಮಾಡುತ್ತಾರೆಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಈ ಅಧಿಕಾರಿಗಳು ಪ್ರಸಿದ್ಧ ಮಿಲಿಟರಿ ನಾಣ್ಣುಡಿ, "ಹವ್ಯಾಸಿಗಳು ತಂತ್ರಗಳ ಬಗ್ಗೆ ಮಾತನಾಡುತ್ತಾರೆ, ಆದರೆ ವೃತ್ತಿಪರರು ಲಾಜಿಸ್ಟಿಕ್ಸ್ ಅನ್ನು ಅಧ್ಯಯನ ಮಾಡುತ್ತಾರೆ" ("Amateurs talk about tactics, but professionals study logistics.”) ಹೃದಯದಲ್ಲಿ ಇಟ್ಟುಕೊಂಡಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.