ETV Bharat / bharat

ಎಲ್​​ಪಿಜಿ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮುಂದಿನ ತಿಂಗಳು ಗುಡ್​ ನ್ಯೂಸ್​!

author img

By

Published : Feb 20, 2020, 11:33 PM IST

ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್​ ದರದಲ್ಲಿ ಮುಂದಿನ ತಿಂಗಳ ಸ್ವಲ್ಪ ಮಟ್ಟದ ಇಳಿಕೆ ಕಂಡು ಬರುವ ಸಾಧ್ಯತೆ ದಟ್ಟವಾಗಿದ್ದು, ಈ ಸಂಬಂಧ ಕೇಂದ್ರ ಸಚಿವರು ಮುನ್ಸೂಚನೆ ನೀಡಿದ್ದಾರೆ.

LPG prices
LPG prices

ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್​ ದರದಲ್ಲಿ ಬರೋಬ್ಬರಿ 144 ರೂ ಏರಿಕೆ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದ ಕೇಂದ್ರ ಸರ್ಕಾರ ಇದೀಗ ಗುಡ್​ನ್ಯೂಸ್ ನೀಡಲು ಮುಂದಾಗಿದೆ ಎಂಬ ಮಾತು ಎಲ್ಲಡೆಯಿಂದ ಕೇಳಿ ಬರುತ್ತಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್​ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಎಲ್​ಪಿಜಿ ದರದಲ್ಲಿ ಇಷ್ಟೊಂದು ಏರಿಕೆಯಾಗಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಬದಲಾವಣೆಗಳೇ ಕಾರಣ. ಬರುವ ದಿನಗಳಲ್ಲಿ ಇದೇ ದರ ಮುಂದುವರಿಯುವುದು ತೀರಾ ಕಡಿಮೆಯಾಗಿದ್ದು, ಮುಂದಿನ ತಿಂಗಳ ಬೆಲೆಯಲ್ಲಿ ಕೊಂಚ ಕಡಿಮೆಯಾಗಲಿದೆ ಎಂದಿದ್ದಾರೆ.

Pradhan
ಧರ್ಮೇಂದ್ರ ಪ್ರದಾನ್,ಕೇಂದ್ರ ಸಚಿವ

ಛತ್ತೀಸ್​ಗಢದಲ್ಲಿ ನೈಸರ್ಗಿಕ ಗ್ಯಾಸ್​ ಪ್ಲ್ಯಾಟ್​​ಗೆ ಭೇಟಿ ನೀಡಿದ್ದ ವೇಳೆ ಅವರು ಮುನ್ಸೂಚನೆ ನೀಡಿದ್ದಾರೆ. ಚಳಿಗಾಲದಲ್ಲಿ ಅನಿಲ ಸಿಲಿಂಡರ್​ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿದ್ದು, ಮುಂದಿನ ತಿಂಗಳ ಇದರ ಬೆಲೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದೇ ವರ್ಷದಲ್ಲಿ ಎಲ್​ಪಿಜಿ ದರದಲ್ಲಿ ಎರಡು ಸಲ ಏರಿಕೆ ಕಂಡು ಬಂದಿದ್ದು, ಸದ್ಯ 14.2 ಕೆಜಿ ಸಿಲಿಂಡರ್​ ಬೆಲೆ 858.50 ರೂ. ಆಗಿದೆ.​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.