ಕಡಲೂರು(ತಮಿಳುನಾಡು): ಕೋವಿಡ್-19 ಲಾಕ್ಡೌನ್ನಿಂದ ತಮಿಳುನಾಡಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಟಿ. ಮಹೇಶ್ವರ್ ಅವರು ಕೆಲಸ ಕಳೆದುಕೊಂಡ ಪರಿಣಾಮ ಮುರುಕ್ಕು ಎಂಬ ತಿಂಡಿ ಮಾರಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ 30 ವರ್ಷದ ಟಿ. ಮಹೇಶ್ವರನ್ ಕಾರ್ಯನಿರ್ವಹಿಸುತ್ತಿದ್ದರು. ಲಾಕ್ಡೌನ್ ಬಳಿಕ ಅವರು ತಮ್ಮ ಕೆಲಸ ಕಳೆದುಕೊಂಡರು. ಈಗ ಅವರು ಕರಾವಳಿ ಕಡಲೂರು ಜಿಲ್ಲೆಯ ತಮ್ಮ ಸ್ಥಳೀಯ ನೇವೆಲಿ ಪಟ್ಟಣದಲ್ಲಿ ಜನಪ್ರಿಯ ಸ್ಥಳೀಯ ತಿಂಡಿಯಾದ ‘ಮುರುಕ್ಕು’ವನ್ನು ಮನೆಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ತಮಿಳುನಾಡಿನಲ್ಲಿ ಕಡಿಮೆ-ವೆಚ್ಚದ ತಾಂತ್ರಿಕ ಶಿಕ್ಷಣ ಮಾದರಿಯು ಹೆಚ್ಚು ಸಮರ್ಥನೀಯವಾಗಿಲ್ಲ. ಈ ವ್ಯವಹಾರಕ್ಕೆ ತಾವು ಹೇಗೆ ಬಂದ್ರಿ ಎಂದು ಟಿ. ಮಹೇಶ್ವರನ್ ಅವರನ್ನು ಕೇಳಿದಾಗ, ಅವರು ಈ ಸಂಪೂರ್ಣ ಕ್ರೆಡಿಟ್ ನನ್ನ ಹೆಂಡತಿಗೆ ಹೋಗುತ್ತದೆ ಎನ್ನುತ್ತಾರೆ. ಅವರ ಪತ್ನಿ ಒಂದು ದಿನ ಸಂಜೆಯ ತಿಂಡಿಗಾಗಿ ಮುರುಕ್ಕು ತಯಾರಿಸಿದರು. ಅದು ತುಂಬಾ ರುಚಿಯಾಗಿತ್ತು. ನಂತರ, ಇದನ್ನೇ ಮಾಡಲು ಆರಂಭಿಸಿ ಜೀವನವನ್ನು ನಡೆಸುತ್ತಿದ್ದೇನೆ. ಸ್ಥಳೀಯರ ಪ್ರೋತ್ಸಾಹದೊಂದಿಗೆ ನಾನು ಸರಾಸರಿ 800 ರೂ.ಗಳನ್ನು ಗಳಿಸುತ್ತಿದ್ದೇನೆ ಎಂದು ಅವರು ಹೇಳಿದರು.