ಪುರಿ (ಒಡಿಶಾ): ಇಸ್ಕಾನ್ ಫೌಂಡೇಶನ್ ವತಿಯಿಂದ ಅಮೆರಿಕಾದಲ್ಲಿ ಮತ್ತೊಮ್ಮೆ ಭಗವಾನ್ ಪುರಿ ಜಗನ್ನಾಥ ದೇವರ ರಥೋತ್ಸವ ನಡೆಸಲಾಗಿದೆ. ಈ ಉತ್ಸವಕ್ಕೆ ಸಂಬಂಧಿಸಿದ ವಿಡಿಯೋವೊಂದು ಲಭ್ಯವಾಗಿದೆ. ಈ ತಿಂಗಳ 10ರಂದು ಉತ್ಸವವನ್ನು ಆಚರಿಸಲಾಗಿದ್ದು, ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಇಸ್ಕಾನ್ ಸಂಸ್ಥೆ ಫೇಸ್ಬುಕ್ನಲ್ಲಿ ವಿಡಿಯೋ ಶೇರ್ ಮಾಡಿದೆ.
ಈ ವಿಡಿಯೋದಲ್ಲಿ ಇಸ್ಕಾನ್ ಸಂಘಟನೆಯ ಭಕ್ತರು ಭಗವಾನ್ ಜಗನ್ನಾಥನ ಮರದ ವಿಗ್ರಹವನ್ನು ದುಬಾರಿ ಕಾರಿನ ಮೇಲಿರಿಸುವ ಮೂಲಕ ರಥೋತ್ಸವ ಆಚರಿಸಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಮತ್ತು ಅಮೆರಿಕನ್ನರು ಭಾಗಿಯಾಗಿದ್ದರು. ಭಾರತದ ರಾಷ್ಟ್ರೀಯ ಧ್ವಜವೂ ಕಾರಿನ ಮೇಲೆ ಹಾರಾಡುತ್ತಿರುವುದು ಕಂಡು ಬಂದಿದೆ.
ಆದರೆ ಈ ರೀತಿಯಲ್ಲಿ ರಥೋತ್ಸವ ಆಚರಣೆ ಮಾಡಿರುವುದಕ್ಕೆ ಪುರಿಯ ದಿಬಯಸಿಂಗ್ ದೇಬ್‌ನ ಗಜಪತಿ ರಾಜ ಎಂಬವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪುರಿಯ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯೂ ಈ ರೀತಿ ರಥೋತ್ಸವ ಆಚರಿಸಬಾರದೆಂದು ಸಲಹೆ ನೀಡಿತ್ತು. ಈ ಮಧ್ಯೆಯೂ ಆಚರಣೆ ನಡೆದಿದೆ.