ಝಾನ್ಸಿ(ಉತ್ತರ ಪ್ರದೇಶ): ಜಿಲ್ಲೆಯ ಹೊರವಲಯದಲ್ಲಿ ಹಠಾತ್ತಾಗಿ ಕಾಣಿಸಿಕೊಂಡ ಮಿಡತೆಗಳ ಹಿಂಡಿನಿಂದ ಆತಂಕ ಸೃಷ್ಟಿಯಾಗಿದ್ದು, ಜಿಲ್ಲಾಡಳಿತವು ಈವರೆಗೆ 40 ಲಕ್ಷ ಮಿಡತೆಗಳನ್ನು ಕೊಂದಿರುವುದಾಗಿ ಹೇಳಿದೆ.
ಮಿಡತೆ ದಾಳಿಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ಆಂಡ್ರಾ ವಂಶಿ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಿಡತೆಗಳ ಹಠಾತ್ ದಾಳಿಯಿಂದಾಗಿ ರಾಸಾಯನಿಕಗಳೊಂದಿಗೆ ತಯಾರಿರಲು ಅಗ್ನಿಶಾಮಕ ದಳಕ್ಕೆ ಜಿಲ್ಲಾಡಳಿತ ನಿರ್ದೇಶಿಸಿದೆ.
ಗ್ರಾಮಸ್ಥರೊಂದಿಗೆ ಸಾಮಾನ್ಯ ಜನರಿಗೂ ಮಿಡತೆ ದಾಳಿ ಕುರಿತು ಎಚ್ಚರಿಕೆ ನೀಡಲಾಗಿದೆ. ಮಿಡತೆಗಳು ಹಸಿರು ಹುಲ್ಲು ಇರುವ ಪ್ರದೇಶಗಳಿಗೆ ಹೋಗುವುದರಿಂದ ಅತಂಹ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಂಡ್ರಾ ವಂಶಿ ಹೇಳಿದ್ದಾರೆ.