ಮುಂಬೈ: ಲಾಕ್ಡೌನ್ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಪತಿಯ ಅಂತ್ಯ ಸಂಸ್ಕಾರವನ್ನು ವಿಡಿಯೋ ಕರೆ ಮೂಲಕ ನೋಡಿದ ಮನ ಕಲಕುವ ಘಟನೆ ಮುಂಬೈನಲ್ಲಿ ನಡೆದಿದೆ.
ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಬಂದ್ ಮಾಲಾಗಿದೆ. ಹೀಗಾಗಿ ಮುಂಬೈನಲ್ಲಿ ಪತಿ ಸಾವಿಗೀಡಾಗಿದ್ದರೂ ಸುಮಾದು 490 ಕಿ.ಮೀ. ದೂರದಿಂದ ಮುಂಬೈ ತಲುಪಲು ಸಾಧ್ಯವಾಗದೆ ವಿಡಿಯೋ ಕರೆ ಮೂಲಕ ಅಂತ್ಯ ಸಂಸ್ಕಾರ ವೀಕ್ಷಿಸಸಿದ್ದಾರೆ.
'ಕ್ಯಾನ್ಸರ್ನಿಂದ ನಮ್ಮ ತಂದೆ ಸಾವಿಗೀಡಾಗಿದ್ದರು. ಲಾಕ್ಡೌನ್ ಇರುವುದರಿಂದ ಮೃತದೇಹವನ್ನು ನಮ್ಮ ಊರಿಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇತ್ತ ನಮ್ಮ ತಾಯಿಯನ್ನೂ ಮುಂಬೈಗೆ ಕರೆತರಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಡಿಯೋ ಕರೆ ಮೂಲಕ ಅಂತ್ಯ ಸಂಸ್ಕಾರದ ದೃಶ್ಯ ನೋಡಲು ವ್ಯವಸ್ಥೆ ಮಾಡಲಾಯಿತು ಎಂದು ಮೃತ ಚಂದ್ರಕಾಂತ್ ಅವರ ಪುತ್ರ ಅಮಿತ್ ಹೇಳಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಚಂದ್ರಕಾಂತ್ ಲಾಕ್ಡೌನ್ ಘೋಷಣೆ ಆಗುವುದಕ್ಕೂ ಒಂದು ದಿನ ಮೊದಲು(ಮಾ.22) ಮುಂಬೈನಲ್ಲಿರುವ ತನ್ನ ಮಗನ ಮನೆಗೆ ಆಗಮಿಸಿದ್ದರು.