ಜೈಪುರ: ಲಾಕ್ಡಾನ್ ಪರಿಣಾಮದಿಂದ ಚಿತಾಭಸ್ಮ ವಿಸರ್ಜನೆಗೂ ಅಡ್ಡಿಯಾಗಿದೆ. ಜೈಪುರದ ಚಾಂದಪೋಲ್ ಘಾಟ್ ಸ್ಮಶಾನದಲ್ಲಿ ಕಾಯ್ದಿಡಲಾಗಿರುವ ಮೃತರ ಚಿತಾಭಸ್ಮವನ್ನು ಒಯ್ಯಲು ಮೃತರ ಬಂಧುಗಳು ಈವರೆಗೂ ಬಂದಿಲ್ಲ. 50 ಜನ ಮೃತರ ಚಿತಾಭಸ್ಮವನ್ನು ಕುಂಡ ಹಾಗೂ ಚೀಲಗಳಲ್ಲಿ ತುಂಬಿಸಿಡಲಾಗಿದೆ. ಆದರೆ ಲಾಕ್ಡೌನ್ ಕಾರಣದಿಂದ ಮೃತರ ಬಂಧುಗಳು ಚಿತಾಭಸ್ಮ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.
ಅಂತ್ಯಸಂಸ್ಕಾರದ ವಿಧಿವಿಧಾನಗಳ ಪ್ರಕಾರ ವ್ಯಕ್ತಿ ಮೃತನಾದ ಮೂರನೇ ದಿನಕ್ಕೆ ಚಿತಾಭಸ್ಮವನ್ನು ನದಿಯಲ್ಲಿ ಬಿಡಲಾಗುತ್ತದೆ. ಆದರೆ ಈಗ ಲಾಕ್ಡೌನ್ ಘೋಷಿಸಲಾಗಿದ್ದು ಬಿಕ್ಕಟ್ಟಿನ ಪರಿಸ್ಥಿತಿ ಇರುವುದರಿಂದ ಅಂತ್ಯಸಂಸ್ಕಾರ ನೆರವೇರಿಸಿದ ಹನ್ನೊಂದುವರೆ ತಿಂಗಳೊಳಗೆ ಯಾವಾಗ ಬೇಕಾದರೂ ಚಿತಾಭಸ್ಮ ವಿಸರ್ಜನೆ ಮಾಡಬಹುದು. ಈಗಿನ ಸಂದರ್ಭದಲ್ಲಿ ಶ್ರಾದ್ಧದ ನಂತರ 12 ತಿಂಗಳ ಒಳಗೆ ಈ ವಿಧಿವಿಧಾನ ನೆರವೇರಿಸಬಹುದು ಎಂದು ಪಂಡಿತ್ ಮುಕೇಶ ಶಾಸ್ತ್ರಿ ಹೇಳಿದ್ದಾರೆ.
ಕೊರೊನಾ ವೈರಸ್ ಬರದಂತೆ ಜಾಗ್ರತೆ ವಹಿಸಲು ಸದ್ಯ ಲಾಕ್ಡೌನ್ ತೆರವಾಗುವವರೆಗೆ ಮೃತರ ಬಂಧುಗಳು ಕಾಯಲೇಬೇಕಿದೆ. ನಂತರವಷ್ಟೇ ಚಿತಾಭಸ್ಮ ವಿಸರ್ಜನೆಯ ವಿಧಿವಿಧಾನಗಳನ್ನು ನೆರವೇರಿಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.