ನವದೆಹಲಿ: ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ದಂತ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಕಂಟೇನ್ಮೆಂಟ್ ಝೋನ್ಗಳಲ್ಲಿ ದಂತ ಚಿಕಿತ್ಸಾಲಯಗಳನ್ನು ತೆರೆಯವುದನ್ನು ನಿರ್ಬಂಧಿಸಲಾಗಿದೆ. ಈ ವಲಯಗಳಲ್ಲಿ ತುರ್ತು ದಂತ ಚಿಕಿತ್ಸೆ ಅಗತ್ಯವಿದ್ದರೆ ಟೆಲಿ ಸರ್ವಿಸ್ ಮುಖಾಂತರ ಸಂಪರ್ಕಿಸಬೇಕು ಹಾಗೂ ಆ್ಯಂಬುಲೆನ್ಸ್ ಬಳಸಿ ಸಮೀಪದ ಕೋವಿಡ್ ದಂತ ಚಿಕಿತ್ಸಾಲಯಕ್ಕೆ ತೆರಳಬೇಕು. ರೆಡ್ ಮತ್ತು ಆರೆಂಜ್ ಝೋನ್ಗಳಲ್ಲಿ ತುರ್ತು ದಂತ ಚಿಕಿತ್ಸೆಗಳನ್ನು ಮಾತ್ರ ನೀಡಬಹುದಾಗಿದೆ. ಗ್ರೀನ್ ಝೋನ್ಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆಯಬಹುದು. ಆದರೆ, ತುರ್ತು ಚಿಕಿತ್ಸೆಗಳನ್ನು ಮಾತ್ರ ನೀಡಬೇಕು.
ಹೊಸ ಮಾರ್ಗಸೂಚಿಗಳನ್ನು ನೀಡುವವರೆಗೂ ಈಗಾಗಲೇ ಜಾರಿಯಲ್ಲಿರುವಂತೆ ಕ್ಯಾವಿಟಿ ಪರೀಕ್ಷೆ, ರಾಷ್ಟ್ರೀಯ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮದಡಿ ಹಲ್ಲಿನ ತಪಾಸಣೆ ನಡೆಸಬಾರದು ಎಂದು ಎಂಹೆಚ್ಎ ಹೇಳಿದೆ.