ಅಜ್ಮೀರ್ (ರಾಜಸ್ಥಾನ): ಮಿಡತೆಗಳ ಹಾವಳಿಗೆ ಬೇಸತ್ತ ಜನ ಅದನ್ನು ಓಡಿಸುವ ಹಲವಾರು ಪ್ರಯತ್ನಗಳಲ್ಲಿ ತೊಡಗಿದ್ದಾರೆ. ರಾಜಸ್ಥಾನದ ಅಜ್ಮೀರ್‌ನ ಸ್ಥಳೀಯರು ಮಂಗಳವಾರ ಪಾತ್ರೆಗಳನ್ನು ಬಡಿದು ಮಿಡತೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.
ಮಕ್ಕಳು ಮತ್ತು ಮಹಿಳೆಯರು ತಮ್ಮ ಮನೆ ಚಾವಣಿಯ ಮೇಲೆ ಪಾತ್ರೆಗಳನ್ನು ಬಡಿದು ಮಿಡತೆ ಓಡಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರು. 14,80,858 ಹೆಕ್ಟೇರ್ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 383 ಸ್ಥಳಗಳ 11,60,091 ಹೆಕ್ಟೇರ್ ಪ್ರದೇಶದಲ್ಲಿ ಮಿಡತೆ ದಾಳಿಯನ್ನು ನಿಯಂತ್ರಿಸಲಾಗಿದೆ ಎಂದು ರಾಜಸ್ಥಾನ ಸರ್ಕಾರದ ಕೃಷಿ ಇಲಾಖೆ ಭಾನುವಾರ ತಿಳಿಸಿದೆ.
ಏಪ್ರಿಲ್ 11 ರಂದು ಜೈಸಲ್ಮೇರ್ ಮತ್ತು ಶ್ರೀಗಂಗನಗರ ಜಿಲ್ಲೆಗಳು ಮೊದಲ ಮಿಡತೆ ದಾಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಮೇ 30 ರಂದು ಅಲ್ವಾರ್ ಜಿಲ್ಲೆಗೆ ಮಿಡತೆಗಳು ದಾಳಿ ಮಾಡಿವೆ ಎಂದು ಇಲಾಖೆ ವರದಿಯಲ್ಲಿ ತಿಳಿಸಿದೆ.