ETV Bharat / bharat

ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಭಾರತ ಸಿದ್ಧ; ಲೋಕಸಭೆಯಲ್ಲಿ ರಾಜನಾಥ್​ ಸಿಂಗ್​

ಭಾರತ ಮತ್ತು ಚೀನಾ ನಡುವಿನ ಗಡಿಯು ಸುಸ್ಥಾಪಿತ ಭೌಗೋಳಿಕ ತತ್ವವನ್ನು ಆಧರಿಸಿದೆ ಎಂದು ಭಾರತ ಪರಿಗಣಿಸುತ್ತದೆ. ಆದರೆ ಗಡಿಯ ಸಾಂಪ್ರದಾಯಿಕ ಮತ್ತು ವಾಡಿಕೆಯ ಜೋಡಣೆಯನ್ನು ಚೀನಾ ಗುರುತಿಸುತ್ತಿಲ್ಲ. ಗಡಿಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನಗಳು ನಡೆದಿದ್ದು, ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಲಾಗಿದೆ ಎಂದು ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾಗೆ ತಿಳಿಸಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಲೋಕಸಭೆಯಲ್ಲಿ ತಿಳಿಸಿದ್ದಾರೆ.

defense-minister
ರಾಜನಾಥ್​ ಸಿಂಗ್​
author img

By

Published : Sep 15, 2020, 4:42 PM IST

ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ಗಡಿವಿವಾದದ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಧ್ವನಿಎತ್ತಿದ್ದಾರೆ. ದೇಶವು ಎಂತಹಾ ಸನ್ನಿವೇಶವನ್ನಾದರೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ಸಿಂಗ್​ ಹೇಳಿದ್ದಾರೆ.

ಲಡಾಖ್​ ಗಡಿಯಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿರುವ ಅವರು, ಇತ್ತೀಚೆಗೆ ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯ ಬಳಿ ತನ್ನ ಕಾರ್ಯತಂತ್ರದ ಮೂಲಕ ಭಾರತವು ಚೀನಾ ಮೇಲೆ ಹಿಡಿತ ಸಾಧಿಸಿದೆ. ಲಡಾಖ್‌ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೋ ಬಳಿಯ ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಲು ಚೀನಾದ ಸೈನಿಕರು ಮಾಡಿದ ಪ್ರಯತ್ನವನ್ನು ನಮ್ಮ ಸೇನೆ ತಡೆದಿದೆ.

ಈ ಬಗ್ಗೆ ಉಭಯ ರಾಷ್ಟ್ರಗಳ ನಡುವೆ ಹಲವು ಹಂತಗಳ ಮಾತುಕತೆ ನಡೆದಿದ್ದು, ಶಾಂತಿ ಪುನಃಸ್ಥಾಪಿಸುವಂತೆ ಮಾತುಕತೆಗಳು ನಡೆದಿವೆ. ಇದು ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವಲ್ಲಿ ಅನಿವಾರ್ಯವಾಗಿದೆ.

ಗಾಲ್ವಾನ್ ವ್ಯಾಲಿ, ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ರಂಗ್ ನಾಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ಸೈನ್ಯವು ಗಡಿ ನಿಯಮಗಳನ್ನು ಉಲ್ಲಂಘಿಸಿದ್ದು, ಭಾರತ ಹಾಗೂ ಚೀನಾ ನಡುವೆ ಕಳೆದ ಏಪ್ರಿಲ್-ಮೇ ತಿಂಗಳಿನಿಂದ ಭಿನ್ನಾಭಿಪ್ರಾಯವಿದೆ.

ಈಗಲೂ, ಭಾರತ ಹಾಗೂ ಚೀನಾ-ನಡುವಿನ ಗಡಿ ಸಮಸ್ಯೆ ಬಗೆಹರಿಯದ ಕಗ್ಗಂಟಾಗಿ ಉಳಿದಿದೆ. ಒಮ್ಮತದಿಂದ ಒಪ್ಪಿಕೊಳ್ಳುವಂತಹ ಯಾವುದೇ ನಿರ್ಧಾರಗಳನ್ನು ಉಭಯ ರಾಷ್ಟ್ರಗಳು ತೆಗೆದುಕೊಂಡಿಲ್ಲ. ಗಡಿ ವಿಚಾರದ ಬಗ್ಗೆ ಯಾವುದನ್ನೂ ಚೀನಾ ಒಪ್ಪಿಕೊಳ್ಳುತ್ತಿಲ್ಲ ಎಂದು ರಾಜನಾಥ್​ ಸಿಂಗ್​ ವಿವರಿಸಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಗಡಿಯು ಸುಸ್ಥಾಪಿತ ಭೌಗೋಳಿಕ ತತ್ವವನ್ನು ಆಧರಿಸಿದೆ ಎಂದು ಭಾರತ ಪರಿಗಣಿಸುತ್ತದೆ. ಆದರೆ ಗಡಿಯ ಸಾಂಪ್ರದಾಯಿಕ ಮತ್ತು ವಾಡಿಕೆಯ ಜೋಡಣೆಯನ್ನು ಚೀನಾ ಗುರುತಿಸುತ್ತಿಲ್ಲ. ಗಡಿಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನಗಳು ನಡೆದಿದ್ದು, ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಲಾಗಿದೆ ಎಂದು ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾಗೆ ತಿಳಿಸಿದ್ದೇವೆ ಎಂದು ಸಿಂಗ್​ ತಿಳಿಸಿದ್ದಾರೆ.

ಚೀನಾದ ಸೈನ್ಯದ ಹಿಂಸಾತ್ಮಕ ನಡವಳಿಕೆಯ ಮೂಲಕ ಈ ಹಿಂದಿನ ಎಲ್ಲ ಒಪ್ಪಂದಗಳ ಉಲ್ಲಂಘನೆಯಾಗಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಗಡಿಗಳನ್ನು ಕಾಪಾಡಲು ನಮ್ಮ ಸೈನ್ಯವು ಈ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ರಾಜನಾಥ್​ ಸಿಂಗ್​ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.