ETV Bharat / bharat

ಬಿಹಾರ ಪ್ರವಾಹಕ್ಕೆ ತತ್ತರಿಸಿದ ಜನ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ನಿತೀಶ್​​ - ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ನಿತೀಶ್​ ಕುಮಾರ್

ಬಿಹಾರದಲ್ಲಿ ಸುಮಾರು 66 ಲಕ್ಷ ಮಂದಿ ಪ್ರವಾಹಕ್ಕೆ ಸಿಲುಕಿದ್ದಾರೆ. ಸಿಎಂ ನಿತೀಶ್​ ಕುಮಾರ್​ ಉತ್ತರ ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

LIVE: Bihar flood situation worsens, 66 lakh affected
ಬಿಹಾರ ಪ್ರವಾಹಕ್ಕೆ ತತ್ತರಿಸಿದ ಜನ
author img

By

Published : Aug 6, 2020, 7:24 AM IST

ಪಾಟ್ನಾ (ಬಿಹಾರ): ನೇಪಾಳದಲ್ಲಿ ಉಗಮವಾದ ನದಿಗಳ ರೌದ್ರ ನರ್ತನ ಮುಂದುವರೆದಿದ್ದರಿಂದ ಬಿಹಾರದ ಪ್ರವಾಹದಲ್ಲಿ ಭಾರಿ ಏರಿಕೆ ಆಗಿದೆ. ಬುಧವಾರ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಬಿಹಾರದ 16 ಜಿಲ್ಲೆಗಳು ಜಲಗಂಡಾಂತರಕ್ಕೆ ಒಳಗಾಗಿವೆ.

ಸುಮಾರು 66 ಲಕ್ಷ ಮಂದಿ ಪ್ರವಾಹಕ್ಕೆ ಸಿಲುಕಿ ನರಳುತ್ತಿದ್ದಾರೆ. ಈ ಮಧ್ಯೆ ಬಿಹಾರ ಸಿಎಂ ನಿತೀಶ್​ ಕುಮಾರ್​ ಉತ್ತರ ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಹೊಸದಾಗಿ ಸುಮಾರು ಮೂರು ಲಕ್ಷ ಮಂದಿ ಸಂಕಷ್ಟಕ್ಕೆ ಈಡಾಗಿದ್ದಾರೆ.

1,165 ಪಂಚಾಯಿತಿಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಸುಮಾರು 4.80 ಲಕ್ಷ ಜನರನ್ನ ಸ್ಥಳಾಂತರಿಸಲಾಗಿದೆ. ದರ್ಭಂಗ ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಇಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಜಿಲ್ಲೆಯೊಂದರಲ್ಲೇ 18.71 ಲಕ್ಷ ಜನ ಪ್ರವಾಹ ಪೀಡಿತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.