ಕುಲ್ಗಾಮ್(ಕಾಶ್ಮೀರ): ಚಿರತೆಯೊಂದನ್ನು ಹೊಡೆದು ಕೊಂದು ಅದರ ಚರ್ಮವನ್ನು ಕಿತ್ತಿರುವ ವಿಲಕ್ಷಣ ಘಟನೆ ದಕ್ಷಿಣ ಕಾಶ್ಮೀರದಲ್ಲಿ ನಡೆದಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಲ್ಮಾತ್ ಗ್ರಾಮದ ಸಮೀಪ ಘಟನೆ ಬೆಳಕಿಗೆ ಬಂದಿದ್ದು, ಚಿರತೆಗೆ ಹಿಗ್ಗಾಮುಗ್ಗ ಹೊಡೆದು ಕೊಂದಿರುವ ಗ್ರಾಮಸ್ಥರು ಬಳಿಕ ಚಿರತೆಯ ಚರ್ಮ ಕಿತ್ತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.