ETV Bharat / bharat

ತಮಿಳುನಾಡು: ರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆದ ಚಿರತೆ - ವಿಡಿಯೋ

ಚಿರತೆಯೊಂದು ರಸ್ತೆಯಲ್ಲಿ ಕುಳಿತು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ದೃಶ್ಯ ತಮಿಳುನಾಡಿನ ಈರೋಡ್ ಜಿಲ್ಲೆಯ ಧಿಂಬಮ್ ಘಾಟ್ ರಸ್ತೆಯಲ್ಲಿ ಕಂಡುಬಂದಿದೆ.

author img

By

Published : Jul 5, 2020, 6:35 PM IST

Updated : Jul 5, 2020, 6:48 PM IST

ರಸ್ತೆಯಲ್ಲಿ ಕೂತು ವಿಶ್ರಾಂತಿ ಪಡೆದ ಚಿರತೆ
ರಸ್ತೆಯಲ್ಲಿ ಕೂತು ವಿಶ್ರಾಂತಿ ಪಡೆದ ಚಿರತೆ

ಈರೋಡ್​(ತಮಿಳುನಾಡು): ಈರೋಡ್ ಜಿಲ್ಲೆಯ ಸತ್ಯಮಂಗಲಂ ಟೈಗರ್ ರಿಸರ್ವ್(ಎಸ್‌ಟಿಆರ್) ದಕ್ಷಿಣ ಭಾರತದ ಸುರಕ್ಷಿತ ಪ್ರಾಣಿಗಳ ಆವಾಸ ಸ್ಥಾನಗಳಲ್ಲಿ ಒಂದಾಗಿದೆ. ಅರಣ್ಯ ಇಲಾಖೆಯ ನಿರಂತರ ಪ್ರಯತ್ನದಿಂದ ಈ ಪ್ರದೇಶದಲ್ಲಿ ವನ್ಯಜೀವಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ರಸ್ತೆಯಲ್ಲಿ ಕೂತು ವಿಶ್ರಾಂತಿ ಪಡೆದ ಚಿರತೆ

ಶನಿವಾರ ಧಿಂಬಮ್ ಘಾಟ್ ರಸ್ತೆಯ 27ನೇ ಹೇರ್‌ಪಿನ್ ಬೆಂಡ್‌ನಲ್ಲಿ ಚಿರತೆ ಕುಳಿತಿತ್ತು. ಇದು ಕೆಲವು ನಿಮಿಷಗಳ ಕಾಲ ಸಂಚಾರಕ್ಕೆ ಅಡ್ಡಿಪಡಿಸಿತ್ತು. ಚಿರತೆ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ನಂತರ ಚಾಲಕ ನಿಧಾನವಾಗಿ ವಾಹನವನ್ನು ಚಲಿಸುತ್ತಿದ್ದುದನ್ನು ನೋಡಿದ ಚಿರತೆ ಅಲ್ಲಿಂದ ಹೊರಟು ಹೋಯಿತು.

ರಸ್ತೆಯಲ್ಲಿ ಕೂತು ವಿಶ್ರಾಂತಿ ಪಡೆದ ಚಿರತೆ
ರಸ್ತೆಯಲ್ಲಿ ಕೂತು ವಿಶ್ರಾಂತಿ ಪಡೆದ ಚಿರತೆ

ಹಲವಾರು ವಾಹನಗಳು ರಸ್ತೆಯಲ್ಲಿಯೇ ನಿಂತಿದ್ದು, ಅದರಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡುತ್ತಿದ್ದರು. ಧಿಂಬಮ್ ಘಾಟ್ ರಸ್ತೆ ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುತ್ತದೆ. ತಲೈಮಲೈ ಹತ್ತಿರ ಕೆಥೆಸಲ್, ಕೆರ್ಮಲಂ, ಧಿಂಬಮ್, ಬನ್ನಾರಿ, ತೆಂಗುಮಾರಹಾದ ಅನೇಕ ಸ್ಥಳಗಳು ಚಿರತೆಗಳ ಪ್ರದೇಶವೆಂದು ಗುರುತಿಸಲಾಗಿದೆ.

Last Updated : Jul 5, 2020, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.