ETV Bharat / bharat

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ನಿಧನ

author img

By

Published : Jan 17, 2021, 6:03 PM IST

ಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಭಾನುವಾರ ಮಧ್ಯಾಹ್ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Ustad Ghulam Mustafa Khan dies at 89
ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ನಿಧನ

ಮುಂಬೈ: ಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ (89) ಭಾನುವಾರ ಮಧ್ಯಾಹ್ನ ತಮ್ಮ ಮುಂಬೈ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಮುಸ್ತಫಾ ಖಾನ್ ಅವರು ಮಧ್ಯಾಹ್ನ 12.37ಕ್ಕೆ ತಮ್ಮ ಬಾಂದ್ರಾ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಸೊಸೆ ನಮ್ರತಾ ಗುಪ್ತಾ ಖಾನ್ ಹೇಳಿದ್ದಾರೆ.

"ಇಂದು ಬೆಳಗ್ಗೆ ಅವರು ಚೆನ್ನಾಗಿದ್ದರು. ನಮ್ಮ ಮನೆಯಲ್ಲಿ ದಿನದ 24 ಗಂಟೆಯೂ ನರ್ಸ್ ಇರುತ್ತಿದ್ದರು. ಅವರು ಮಸಾಜ್ ಮಾಡುತ್ತಿರುವಾಗ ವಾಂತಿ ಮಾಡಿಕೊಂಡರು. ಆಗ ನಾನು ತಕ್ಷಣ ಓಡಿಬಂದೆ. ಅವರು ಕಣ್ಣನ್ನು ಮುಚ್ಚಿದ್ದರು, ನಿಧಾನವಾಗಿ ಉಸಿರಾಡುತ್ತಿದ್ದರು. ನಾವು ವೈದ್ಯರಿಗೆ ಕರೆ ಮಾಡಿದ್ವಿ, ಅವರು ಬರುವುದರೊಳಗೆ ಸಾವನ್ನಪ್ಪಿದ್ದರು." ಎಂದು ನಮ್ರತಾ ಹೇಳಿದರು.

ಖಾನ್ ಅವರ ಹಠಾತ್​​ ನಿಧನದಿಂದ ಕುಟುಂಬವು ಆಘಾತಕ್ಕೊಳಗಾಗಿದೆ. ಮಾರ್ಚ್ 3 ರಂದು ಅವರು 90ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಖಾನ್ ಅವರು 2019ರಿಂದ ಮೆದುಳಿನ ಪಾರ್ಶ್ವವಾಯು ಹೊಡೆತದಿಂದ ಬಳಲುತ್ತಿದ್ದರು ಮತ್ತು ಅವರ ದೇಹದ ಎಡಭಾಗವು ಪಾರ್ಶ್ವವಾಯುವಿಗೆ ಒಳಗಾಗಿತ್ತು.

ಖಾನ್ ಅವರ ನಿಧನದ ಸುದ್ದಿಯನ್ನು ನಮ್ರತಾ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಖಾನ್ ಅವರ ಕೊನೆಯ ವಿಧಿ ವಿಧಾನಗಳನ್ನು ಇಂದು ಸಂಜೆ ಸಾಂತಾಕ್ರೂಜ್ ಕಬ್ರಸ್ತಾನ್​ನಲ್ಲಿ ನಡೆಸಲಾಗುವುದು.

ಓದಿ:ಪ್ರವಾಸಿಗರಿಗೆ ನಿರಾತಂಕ.. ಏಕತಾ ಪ್ರತಿಮೆ ಸಂಪರ್ಕಿಸಲಿವೆ ಎಂಟು ರೈಲುಗಳು..

ಮಾರ್ಚ್ 3, 1931 ರಂದು ಉತ್ತರ ಪ್ರದೇಶದ ಬಾದೌನ್​​ನಲ್ಲಿ ಖಾನ್ ಜನಿಸಿದರು. ಅವರು ನಾಲ್ಕು ಸಹೋದರರು ಮತ್ತು ಮೂವರು ಸಹೋದರಿಯರನ್ನು ಹೊಂದಿದ್ದು, ಇವರು ಕುಟುಂಬದ ಹಿರಿಯ ಮಗನಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.