ETV Bharat / bharat

ಚಂದ್ರಯಾನ 2 ಧಿಡೀರ್​ ನಿಂತಿದ್ದೇಕೆ... ತಜ್ಞರು ನೀಡುವ ಕಾರಣಗಳು ಹೀಗಿವೆ

ತಾಂತ್ರಿಕ ದೋಷ ಹಿನ್ನೆಲೆ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಈ ಕುರಿತು ಬಿರ್ಲಾ ಪ್ಲಾನಿಟೋರಿಯಮ್​ ಅಂಡ್​ ಸೈನ್ಸ್​ ಸೆಂಟರ್​ ನ ನಿರ್ದೇಶಕ ಸಿದ್ದಾರ್ಥ್ ಅವರು ಈಟಿವಿ ಭಾರತ್​ಗೆ ನೀಡಿದ ಎಕ್ಸ್ಯೂಸ್ಲಿವ್​ ಸಂದರ್ಶನ ಇಲ್ಲಿದೆ.

ಕ್ರಯೋಜನಿಕ್​ ಇಂಜಿನ್​ನಲ್ಲಿ ಲೀಕ್​ ಚಂದ್ರಯಾನ-2 ರಾಕೆಟ್​ ಉಡಾವಣೆ ಮುಂದೂಡಿಕೆ
author img

By

Published : Jul 15, 2019, 10:36 AM IST

Updated : Jul 15, 2019, 12:20 PM IST

ಹೈದರಾಬಾದ್​( ತೆಲಂಗಾಣ) : ಇಂದು ಮುಂಜಾನೆ 2.51ಕ್ಕೆ ಭಾರತದ ಬಹುನಿರೀಕ್ಷಿತ ಚಂದ್ರಯಾನ -2 ಉಡಾವಣೆ ನಡೆಯಬೇಕಿತ್ತು. ಆದರೆ ಉಡಾವಣೆಗೆ 56 ನಿಮಿಷಗಳ ಮುಂಚಿತವಾಗಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಉಡಾವಣೆಯನ್ನು ರದ್ದುಗೊಳಿಸಲಾಯ್ತು.

ಕ್ರಯೋಜನಿಕ್​ ಇಂಜಿನ್​ನಲ್ಲಿ ಸ್ವಲ್ಪ ಮಟ್ಟದ ಇಂಜಿನ್​ ಸೋರಿಕೆ ಕಂಡು ಬಂದ ಕಾರಣ ಕೊನೆ ಘಳಿಗೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡಾವಣೆ ಸ್ಥಗಿತಗೊಳಿಸಲಾಯ್ತು ಎಂದು ಹೇಳಲಾಗಿದೆ. ಒಂದು ವೇಳೆ, ಇಂಜಿನ್​ ಸೋರಿಕೆ ನಡುವೆಯೂ ರಾಕೆಟ್​ ಉಡಾವಣೆ ಮಾಡಿದ್ದಲ್ಲಿ ಇದು ರಾಕೆಟ್​ ಉಡಾವಣೆ ಪ್ಯಾಡ್​ನಲ್ಲಿ ಅಥವಾ ಉಡಾವಣೆಯಾದ ನಂತರ ನಭದಲ್ಲಿ ತೊಂದರೆಯುಂಟು ಮಾಡುವ ಸಾಧ್ಯತೆ ಇತ್ತು. ಈ ರೀತಿ ಅಮೆರಿಕ ಹಾಗೂ ರಷ್ಯಾದಲ್ಲಿ ನಡೆದಿದೆ. ಹಾಗಾಗಿ ಇದು ಅತ್ಯಂತ ಅಪಾಯಕಾರಿಯಾದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರದ್ದುಗೊಳಿಸಲಾಯ್ತು ಎಂದು ಸಿದ್ದಾರ್ಥ್ ತಿಳಿಸಿದ್ದಾರೆ.

ಕ್ರಯೋಜನಿಕ್​ ಇಂಜಿನ್​ನಲ್ಲಿ ಲೀಕ್​ ಚಂದ್ರಯಾನ-2 ರಾಕೆಟ್​ ಉಡಾವಣೆ ಮುಂದೂಡಿಕೆ

978 ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಈ ತಾಂತ್ರಿಕ ದೋಷ ಹೇಗೆ ಕಂಡುಬಂತು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದು ಕೇವಲ 48 ಗಂಟೆಗಳಲ್ಲಿ ಆಗುವಂತದ್ದಲ್ಲ. ವಾರಗಟ್ಟಲೆ ಸಮಯ ಬೇಕಾಗುತ್ತದೆ ಪರಿಶೀಲನೆ ಮುಗಿದ ಬಳಿಕ ಸೂಕ್ತ ಸಮಯ ಹಾಗೂ ಚಂದ್ರ, ಭೂಮಿ ಚಲನವಲನಗಳು ಎಲ್ಲವನ್ನೂ ನೋಡಿಕೊಂಡು ಸೂಕ್ತ ವೇಳೆ ಮತ್ತೆ ಉಡಾವಣೆ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಕ್ರಯೋಜನಿಕ್​ ಇಂಜಿನ್ ನಲ್ಲಿ ಲೀಕ್​ ಅದಾಗೇ ಆಗಿರುವಂಥದ್ದು. ಇದು ಎಲ್ಲಿ ಯಾವಾಗ ಬೇಕಾದ್ರೂ ಆಗಬಹುದು ಎಂದರು. ಇತ್ತೀಚೆಗೆ ಚೀನಾದಲ್ಲಿ ಕೂಡ ಈ ರೀತಿ ಲೀಕೇಜ್​ ಕಂಡು ಬಂದಿತ್ತು ಎಂದು ತಿಳಿಸಿದ್ರು.

ಈ ರೀತಿಯ ಇಂಧನ ಲೀಕ್​ ಕಂಡು ಬಂದಾಗ ರಾಕೆಟ್​ ಉಡಾವಣೆ ಮಾಡದಿರುವುದು ಸೂಕ್ತ. ಒಂದು ವೇಳೆ ಮಾಡಿದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂದ್ರು. ಚಂದ್ರಯಾನ-1 ಉಡಾವಣೆಗೆ ಪಿಎಸ್​ಎಲ್​ವಿ ರಾಕೆಟ್​ ಬಳಸಿಕೊಳ್ಳಲಾಗಿತ್ತು. ಆದರೆ, ಚಂದ್ರಯಾನ-2 ಉಡಾವಣೆಗೆ ವಿಕ್ರಂ ಲ್ಯಾಂಡರ್​ ಹಾಗೂ ಪ್ರಜ್ಞಾ ರೋವರ್​ ಬಳಸಿಕೊಳ್ಳಲಾಗಿದೆ. ಯಾಕೆಂದರೆ ಚಂದ್ರಯಾನ-2 ರಾಕೆಟ್ ​ಪೆ ಲೋಡ್​ 2400 ಕಿಲೋ.ಗ್ರಾಂ ತೂಕವಿದ್ದು ಪಿಎಸ್​ಎಲ್​ವಿ ಗೆ ಇಷ್ಟು ಸಾಮರ್ಥ್ಯ ಇಲ್ಲ. ಹಾಗಾಗಿ ಪ್ರಜ್ಞಾ ರೋವರ್ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ರು. ಒಟ್ಟಿನಲ್ಲಿ ತಾಂತ್ರಿಕ ದೋಷದಿಂದ ಮುಂದೂಡಲಾಗಿರುವ ಚಂದ್ರಯಾನ -2 ರಾಕೆಟ್​ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಕೆಲವು ವಾರಗಳಲ್ಲಿ ಮತ್ತೆ ಉಡಾವಣೆಗೊಂಡು ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ಸಿದ್ದಾರ್ಥ್ ವ್ಯಕ್ತಪಡಿಸಿದ್ದಾರೆ.

ಇನ್ನು ಚಂದ್ರಯಾನ -2 ಉಡಾವಣೆ ಕುರಿತು ಪ್ರತಿಕ್ರಿಯಿಸಿರುವ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ & ಅನಾಲಿಸಿಸ್ ಮಾಜಿ ನಿರ್ದೇಶಕ ಜಿ.ಬಾಲಚಂದ್ರನ್​ ತಾಂತ್ರಿಕ ದೋಷದಿಂದ ಇಷ್ಟು ದೊಡ್ಡ ಪ್ರಾಜೆಕ್ಟ್​ ಅನ್ನು ಸ್ಥಗಿತಗೊಳಿಸಲಾಗಿದೆ. ಇದು ರಾಕೆಟ್​ ಉಡಾವಣೆಯಲ್ಲಿ ಸಾಮಾನ್ಯ. ಆದರೆ ಈ ಕುರಿತು ಕೂಲಂಕಶವಾಗಿ ಪರಿಶೀಲನೆ ಮಾಡುವ ಅಗತ್ಯವಿದೆ ಎಂದಿದ್ದಾರೆ.

Intro:Body:

National

Conclusion:
Last Updated : Jul 15, 2019, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.