ಕೊಲಂಬೊ: ಸಿಂಹಳೀಯರ ನಾಡು ಶ್ರೀಲಂಕಾದಲ್ಲಿ ಹೊಸ ಅಧ್ಯಕ್ಷರಿಗಾಗಿ ಚುನಾವಣೆಗೆ ನಡೆದ ಮತದಾನ ಇಂದು ಮುಕ್ತಾಯಗೊಂಡಿದ್ದು, ಈಗಾಗಲೇ ಮತ ಎಣಿಕೆ ಪ್ರಾರಂಭಗೊಂಡಿರುವ ಕಾರಣ ನಾಳೆ ಫಲಿತಾಂಶ ಹೊರ ಬೀಳಲಿದೆ.
ಅಧ್ಯಕ್ಷೀಯ ಸ್ಥಾನಕ್ಕಾಗಿ ಒಟ್ಟು 35 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅದರಲ್ಲಿ ಗೋಟಬಾಯ ರಾಜಪಕ್ಸ್ ಹಾಗೂ ಸಜಿತ್ ಪ್ರೇಮದಾಸ್ ನಡುವೆ ನೇರ ಹೋರಾಟವಿದೆ. ಗೋಟಬಾಯ ರಾಜಪಕ್ಸೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಸಹೋದರನಾಗಿದ್ದು, ಸಜಿತ್ ಪ್ರೇಮದಾಸ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಮಗ.
ಇಬ್ಬರು ಅಬ್ಬರದ ಪ್ರಚಾರ ನಡೆಸಿ ದೇಶದ ಅಭಿವೃದ್ಧಿ, ಗ್ರಾಮೀಣ ಜನರ ಏಳಿಗೆ, ಉದ್ಯೋಗ ಹಾಗೂ ಭದ್ರತಾ ವ್ಯವಸ್ಥೆ ಸೇರಿದಂತೆ ಪ್ರಮುಖ ಜನಪ್ರೀಯ ಯೋಜನೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ 2.2 ಕೋಟಿ ಜನಸಂಖ್ಯೆ ಇದ್ದು, ಈ ಸಲದ ಮತದಾನದಲ್ಲಿ 1.6 ಕೋಟಿ ಜನರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೆಲವೊಂದು ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಮತದಾನ ನಡೆದಿಲ್ಲ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಯ ಪ್ರತ್ಯಕ್ಷ ವರದಿ ಈ ಟಿವಿ ಭಾರತ ನೀಡುತ್ತಿದ್ದು, ನಮ್ಮ ವರದಿಗಾರ ಅಲ್ಲಿಗೆ ತೆರಳಿ ಕ್ಷಣಕ್ಷಣದ ಮಾಹಿತಿ ನೀಡುತ್ತಿದ್ದಾರೆ.