ನವದೆಹಲಿ: ಭ್ರಷ್ಟಾಚಾರದ ಆರೋಪ ಹೊತ್ತು ವಿದೇಶದಲ್ಲಿ ನೆಲೆಸಿರುವ ಲಲಿತ್ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮೋದಿ ಎಂಬ ಉಪನಾಮ ಇರುವವರೆಲ್ಲಾ ಕಳ್ಳರೇ ಎಂದು ರಾಹುಲ್ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿರುವ ಲಲಿತ್ ಮೋದಿ, ರಾಹುಲ್ರನ್ನು ಕೋರ್ಟ್ಗೆಳೆಯುತ್ತೇನೆ ಎಂದು ಆಕ್ರೋಶದಿಂದ ನುಡಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಲಲಿತ್, ಪಪ್ಪು ರಾಹುಲ್ ಗಾಂಧಿ ಎಲ್ಲ ಮೋದಿಗಳು ಚೋರರೇ ಎಂದು ಹೇಳಿದ್ದಾರೆ. ಅವರನ್ನು ಇಂಗ್ಲೆಂಡ್ ಕೋರ್ಟ್ಗೆ ಎಳೆಯುತ್ತೇನೆ. 5 ದಶಕಗಳಿಂದ ದೇಶವನ್ನು ಲೂಟಿ ಮಾಡುತ್ತಿರುವುದು ಗಾಂಧಿ ಕುಟುಂಬ ಎಂದು ಇಡೀ ವಿಶ್ವಕ್ಕೇ ಗೊತ್ತು ಎಂದು ಕುಟುಕಿದ್ದಾರೆ.
-
The #papu @rahulgandhi says “All MODI’s are CHOR’s”. Well he will be taken to court in the UK by Me. But reality is that the world knows 5 decades of daylight #looting of #India was and is done by none other than the #Gandhi #family 🙏 @narendramodi pic.twitter.com/0jukYmmhF2
— Lalit Kumar Modi (@LalitKModi) April 18, 2019 " class="align-text-top noRightClick twitterSection" data="
">The #papu @rahulgandhi says “All MODI’s are CHOR’s”. Well he will be taken to court in the UK by Me. But reality is that the world knows 5 decades of daylight #looting of #India was and is done by none other than the #Gandhi #family 🙏 @narendramodi pic.twitter.com/0jukYmmhF2
— Lalit Kumar Modi (@LalitKModi) April 18, 2019The #papu @rahulgandhi says “All MODI’s are CHOR’s”. Well he will be taken to court in the UK by Me. But reality is that the world knows 5 decades of daylight #looting of #India was and is done by none other than the #Gandhi #family 🙏 @narendramodi pic.twitter.com/0jukYmmhF2
— Lalit Kumar Modi (@LalitKModi) April 18, 2019
ಮಹಾರಾಷ್ಟ್ರದಲ್ಲಿ ನಡೆದ ಚುನವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್, ಯಾಕೆ ಎಲ್ಲ ಕಳ್ಳರು ತಮ್ಮ ಹೆಸರಿನ ಹಿಂದೆ ಮೋದಿ ಎಂದು ಉಪನಾಮ ಇಟ್ಟುಕೊಂಡಿದ್ದಾರೆ? ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ. ಇನ್ನೆಷ್ಟು ಮೋದಿಗಳು ಹೊರಬರ್ತಾರೋ ಗೊತ್ತಿಲ್ಲ ಎಂದು ಛೇಡಿಸಿದ್ದರು.
ಈ ಮೊದಲು ನರೇಂದ್ರ ಮೋದಿ ಸಹ ರಾಹುಲ್ ಹೇಳಿಕೆಯನ್ನು ಖಂಡಿಸಿದ್ದರು. ಛತ್ತೀಸ್ಗಢದಲ್ಲಿ ನಡೆದ ಸಮಾವೇಶದಲ್ಲಿ ಇಂತಹ ಮಾತನ್ನಾಡುವವರನ್ನು ಕಿತ್ತೊಗೆಯಬೇಕು. ಗುಜರಾತ್ನಲ್ಲಿ ಮೋದಿ ಎಂದು ಕರೆಸಿಕೊಳ್ಳುವ ಸಮುದಾಯದವರೆಲ್ಲ ಕಳ್ಳರೇ ಎಂದು ಪ್ರಶ್ನೆ ಮಾಡಿದ್ದರು.