ನವದೆಹಲಿ: ಗುಜರಾತ್ನ ಸೂರತ್ ನಗರದ ಬ್ಯಾಂಕ್ನ ಮಹಿಳಾ ಉದ್ಯೋಗಿ ಮೇಲೆ ಪೊಲೀಸ್ ಕಾನ್ಸ್ಟೆಬಲ್ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದಾರೆ.
-
Spoke to Dr. Dhaval Patel, Collector, Surat, on the incident of a lady staff of a Bank being assaulted in the premises. Although currently on leave, he assured me that timely action will be taken on the FIR filed late night. @canarabank @PIB_India @CP_SuratCity @DarshanaJardosh
— Nirmala Sitharaman (@nsitharaman) June 24, 2020 " class="align-text-top noRightClick twitterSection" data="
">Spoke to Dr. Dhaval Patel, Collector, Surat, on the incident of a lady staff of a Bank being assaulted in the premises. Although currently on leave, he assured me that timely action will be taken on the FIR filed late night. @canarabank @PIB_India @CP_SuratCity @DarshanaJardosh
— Nirmala Sitharaman (@nsitharaman) June 24, 2020Spoke to Dr. Dhaval Patel, Collector, Surat, on the incident of a lady staff of a Bank being assaulted in the premises. Although currently on leave, he assured me that timely action will be taken on the FIR filed late night. @canarabank @PIB_India @CP_SuratCity @DarshanaJardosh
— Nirmala Sitharaman (@nsitharaman) June 24, 2020
ಈ ಕುರಿತು ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್ ಹಲ್ಲೆಯ ಕುರಿತು ಸೂರತ್ ಪೊಲೀಸ್ ಕಮೀಷನರ್ ಹಾಗೂ ಕಲೆಕ್ಟರ್ ಅವರೊಂದಿಗೆ ಮಾತನಾಡಿದ್ದೇನೆ. ಹಲ್ಲೆ ಮಾಡಿದ ಪೊಲೀಸ್ ಕಾನ್ಸ್ಟೆಬಲ್ ಅನ್ನು ಅಮಾನತು ಮಾಡಿ ಬ್ಯಾಂಕ್ಗೆ ರಕ್ಷಣೆ ಒದಗಿಸುವಂತೆ ಸೂಚಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸಂಜೆ ಸೂರತ್ನ ಸಿರೋಲಿಯಲ್ಲಿರುವ ಕೆನರಾ ಬ್ಯಾಂಕ್ ಬ್ರಾಂಚ್ ಉದ್ಯೋಗಿಯ ಮೇಲೆ ಪೊಲೀಸ್ ಕಾನ್ಸ್ಟೆಬಲ್ ಬ್ಯಾಂಕ್ನೊಳಗೇ ನುಗ್ಗಿ ಹಲ್ಲೆ ನಡೆಸಿದ್ದರು. ಇದಕ್ಕೆ ಆಲ್ ಇಂಡಿಯಾ ಬ್ಯಾಂಕ್ ಉದ್ಯೋಗಿಗಳ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿತ್ತು.
ನಂತರ ಪೊಲೀಸ್ ಕಾನ್ಸ್ಟೆಬಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನೆ ನಡೆಸಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆಯಲಾಗಿತ್ತು. ಈಗ ಸಚಿವೆ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದು, ಕಾನ್ಸ್ಟೆಬಲ್ ಅನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಪೊಲೀಸರು ಕಾನ್ಸ್ಟೆಬಲ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.