ನವದೆಹಲಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ, ಕುರಿನ್ ಸಿಸ್ಟಂ ಸಂಸ್ಥೆಯು ಮೊದಲ ಬಾರಿಗೆ ಎಲೆಕ್ಟ್ರಾನಿಕ್ ವಾಯು ಶುದ್ಧೀಕರಣ ಮಾಸ್ಕ್ ಪರಿಚಯಿಸಿದೆ.
ಈ ಮಾಸ್ಕ್ ಬಗ್ಗೆ ಮಾನಾಡಿರುವ, ಕುರಿನ್ ಸಿಸ್ಟಂ ಸಹ ಸಂಸ್ಥಾಪಕ ಪವನೀತ್ ಪುರಿ, ಸಾಮಾನ್ಯ N95 ಮಾಸ್ಕ್ಗಳನ್ನು ಧರಿಸಿ ನೀವು ಗಾಳಿಯನ್ನು ಉಸಿರಾಡುವಾಗಲೆಲ್ಲಾ ಸ್ವಲ್ಪ ಕಷ್ಟವಾಗುತ್ತದೆ. ಎಲ್ಲಾ N95 ಮಾಸ್ಕ್ಗಳು ತುಂಬಾ ಬಿಗಿಯಾಗಿರುತ್ತವೆ, ಯಾವುದೇ ಕಣಗಳು ಹಾದುಹೋಗುವುದಿಲ್ಲ. ಉಸಿರಾಟದ ತೊಂದರೆಗಳನ್ನು ತಪ್ಪಿಸಲು, ಹೊಸ ಮಾಸ್ಕ್ನಲ್ಲಿ ಬಾಯಿಯ ಮುಂದೆ ಫ್ಯಾನ್ ಇರುವ ಮೋಟಾರ್ ಇದೆ, ಇದರಲ್ಲಿ ಫಿಲ್ಟರ್ ಕೂಡ ಇದೆ ಎಂದಿದ್ದಾರೆ.
ಮಾಸ್ಕ್ಗೆ ( Kurin Atom Ver 2.0.4) ಸಂಬಂಧಿಸಿದಂತೆ ಕಂಪನಿಯು ಐಸಿಎಂಆರ್ನಿಂದ ಅನುಮೋದನೆ ಪಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುರಿ, ನಮಗೆ ಐಸಿಎಂಆರ್ ಅನುಮೋದನೆ ಅಗತ್ಯವಿಲ್ಲ, ನಮಗೆ ಬಿಐಎಸ್ ಅನುಮೋದನೆ ಬೇಕು. ಇದು ಎಲೆಕ್ಟ್ರಾನಿಕ್ ಸಾಧನವಾಗಿರುವುದರಿಂದ, ಇದು ಪೋರ್ಟಬಲ್ ಏರ್ ಪ್ಯೂರಿಫೈಯರ್ ಆಗಿದೆ. ಇದು ಮಾಸ್ಕ್ ಆಗಿ ಅರ್ಹತೆ ಪಡೆಯುವುದಿಲ್ಲ ಎಂದಿದ್ದಾರೆ.
ಮೊದಲು ಕುರಿನ್ ಆಟಮ್( Kurin Atom Ver 2.0.4) ಅನ್ನು 2017 ರಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಆ ಸಮಯದಲ್ಲಿ, ಇದು ಕೇವಲ ಪೋರ್ಟಬಲ್ ಏರ್ ಪ್ಯೂರಿಫೈಯರ್ ಆಗಿತ್ತು ಮತ್ತು ಅದರ ವಿನ್ಯಾಸದಿಂದಾಗಿ ಮಕ್ಕಳು ಆರಂಭದಲ್ಲಿ ಮಾಸ್ಕ್ಗಳನ್ನು ಧರಿಸಲು ಇಷ್ಟಪಡುತ್ತಿರಲಿಲ್ಲ ಎಂದಿದ್ದಾರೆ.
ಆದರೆ ಈ ಸಮಯದಲ್ಲಿ ನಾವು ಹೊರಹಾಕಿದ ಇಂಗಾಲದ ಡೈಆಕ್ಸೈಡ್ ಮತ್ತು ವೆಂಟಿಲೇಷನ್ ಬಗ್ಗೆಯೂ ಕೆಲಸ ಮಾಡಿದ್ದೇವೆ. ಯಾವುದೇ ಏರೋಸಾಲ್‌ಗಳು ಖಾಲಿಯಾಗದಂತೆ ಉಸಿರಾಡುವ ಗಾಳಿಯನ್ನು ಸಹ ಫಿಲ್ಟರ್ ಮಾಡಲಾಗುತ್ತದೆ. ಇದು ಈ ಸಮಯದಲ್ಲಿ ದೊಡ್ಡ ಕಾಳಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕುರಿನ್ ಆಟಮ್ ಅತ್ಯಾಧುನಿಕ ಮೋಟಾರ್ ಮತ್ತು ಫ್ಯಾನ್‌ನೊಂದಿಗೆ ಅಳವಡಿಸಲಾಗಿದ್ದು, ಅದು ಶುದ್ಧ ಗಾಳಿಯ ಸೇವನೆಗೆ ಸಹಾಯ ಮಾಡುತ್ತದೆ. ಪ್ರಕ್ರಿಯೆಯ ಮೊದಲ ಹಂತದಲ್ಲಿ, ಮಾಸ್ಕ್ನ ಮುಂಭಾಗದಲ್ಲಿ ಗಾಳಿಯನ್ನು ಹೀರಿಕೊಳ್ಳುತ್ತದೆ ಮತ್ತು ಅದು ನಾಲ್ಕು ಪದರಗಳ ಶೋಧನೆ ಮೂಲಕ ಹಾದು ಹೋಗುತ್ತದೆ.
ಸೌಮ್ಯ ಉಸಿರಾಟದ ತೊಂದರೆ ಹೊಂದಿರುವ ರೋಗಿಗಳಿಗೆ ಸಹಾಯ ಮಾಡಲು ಆಸ್ಪತ್ರೆಗಳಿಗೆ ಮಾಸ್ಕ್ಗಳನ್ನು ವ್ಯಾಪಕವಾಗಿ ಒದಗಿಸಲಾಗುತ್ತಿದೆ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತಿದೆ.