ಕೋಲ್ಕತ್ತಾ: ಶ್ವಾಸಕೋಶದ ತೀವ್ರ ಸಮಸ್ಯೆ ಮತ್ತು ಹೃದಯ ರೋಗಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳಿಬ್ಬರಿಗೆ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟ ಯುವಕನೊಬ್ಬ ಇಬ್ಬರ ಬದುಕಿಗೆ ಹೊಸ ಜೀವ ನೀಡಿದ್ದಾರೆ.
ಮಿದುಳಿನೊಳಗೆ ರಕ್ತಸ್ರಾವದಿಂದಾಗಿ ಇಲ್ಲಿನ ರುಬಿ ಆಸ್ಪತ್ರೆಯಲ್ಲಿ ನವೆಂಬರ್ 6ರಿಂದ 28 ವರ್ಷದ ಕೌಸ್ತವ್ ರಾಯ್ ಚಿಕಿತ್ಸೆ ಪಡೆಯುತ್ತಿದ್ದರು. ನರವಿಜ್ಞಾನಿ, ನರಶಸ್ತ್ರಚಿಕಿತ್ಸಕ, ನೆಫ್ರಾಲಜಿಸ್ಟ್, ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಮತ್ತು ಇತರರು ಸೇರಿದಂತೆ ಮಲ್ಟಿಸ್ಪೆಷಾಲಿಟಿ ತಂಡವು ಕೌಸ್ತವ್ನನ್ನು ಉಳಿಸಲು ಪ್ರಯತ್ನಿಸಿದರು. ಆದ್ರೂ ಸಹ ಒಂದೊಂದಾಗಿ ಅಂಗಾಂಗಳು ವಿಫಲಗೊಳ್ಳಲು ಪ್ರಾರಂಭಿಸಿದವು. ಕೊನೆಯದಾಗಿ ಮಿದುಳು ನಿಷ್ಕ್ರಿಯಗೊಂಡಿದ್ದು, ಕೌಸ್ತವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಆತನ ಕುಟುಂಬಸ್ಥರಿಗೆ ತಿಳಿಸಿದರು.
ಇಬ್ಬರು ರೋಗಿಗಳು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ನಿಮ್ಮ ಮಗನ ಅಂಗಾಂಗಗಳು ದಾನ ಮಾಡವ ಮೂಲಕ ಅವರ ಪ್ರಾಣ ಉಳಿಯುತ್ತದೆ ಎಂದು ವೈದ್ಯರು ಕೌಸ್ತವ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಕೌಸ್ತವ್ ಕುಟುಂಬಸ್ಥರು ಮಗನ ಅಂಗಾಂಗಗಳನ್ನು ದಾನ ಮಾಡಲು ಮುಂದಾದರು. ವೈದ್ಯರು ಕೌಸ್ತವ್ ಮೃತ ದೇಹದಿಂದ ಶ್ವಾಸಕೋಶ, ಹೃದಯ ಮತ್ತು ಚರ್ಮವನ್ನು ಪಡೆದರು.
ಮೃತ ಯುವಕನಿಂದ ಪಡೆದ ಅಂಗಗಳನ್ನು ಹೌರಾ ನಿವಾಸಿ 48 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಶ್ವಾಸಕೋಶ ಕಸಿ ಮಾಡಲಾಗಿದೆ. ಜಂಗಲ್ಪಾರ್ ನಿವಾಸಿ 55 ವರ್ಷದ ಮಹಿಳೆಗೆ ರೋಗಿಗೆ ಹೃದಯ ಕಸಿ ಮಾಡಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸ್ನಾತಕೋತ್ತರ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಯ ವೈದ್ಯರು ತಿಳಿಸಿದರು.
ಒಟ್ಟಿನಲ್ಲಿ ಮೃತ ಯುವಕನ ಅಂಗಾಂಗಗಳ ದಾನದಿಂದ ಇಬ್ಬರು ಮರು ಜೀವ ಪಡೆದುಕೊಂಡಿದ್ದಾರೆ.