ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಮಾನದಲ್ಲಿ ಪ್ರಯಾಣಿಸುವಾಗ ಬಹುಪಾಲು ಬ್ಯುಸಿನೆಸ್ ಕ್ಲಾಸ್ ಬದಲಿಗೆ ಮಾಧ್ಯಮದವರೊಂದಿಗೆ, ಕ್ಯಾಮರಾಮನ್ಗಳು, ಸೌಂಡ್ ಇಂಜಿನಿಯರ್ಗಳೊಂದಿಗೆ ಪ್ರಯಾಣಿಸಲು ಇಷ್ಟಪಡುತ್ತಿದ್ದರು ಎಂದು ಮಾಜಿ ಟೀಂ ಇಂಡಿಯಾ ನಾಯಕ ಸುನಿಲ್ ಗವಾಸ್ಕರ್ ಬಹಿರಂಗಪಡಿಸಿದ್ದಾರೆ.
ಅಂಕಣವೊಂದರಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದ ಅವರು ಈಗ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನೂ ಹೊಗಳಿದ್ದಾರೆ. ಕೊಹ್ಲಿ ಎಕಾನಮಿ ಕ್ಲಾಸ್ನಲ್ಲಿ ಕುಳಿತು, ಬೇರೆ ಆಟಗಾರರಿಗೆ ತನ್ನ ಆಸನ ಬಿಟ್ಟುಕೊಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ತೆರಳುವಾಗ ಕೆಲವೇ ಕೆಲವು ಬ್ಯುಸಿನೆಸ್ ಕ್ಲಾಸ್ ಆಸನಗಳನ್ನು ಟೀಂ ಇಂಡಿಯಾ ನಾಯಕರು, ಮ್ಯಾನೇಜರ್ಗಳು ಹಾಗೂ ಕೋಚ್ಗಳಿಗೆ ಮಾತ್ರ ನೀಡಲಾಗುತ್ತಿತ್ತು. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಕೂಡಾ ಇಂತಹ ಭಾವನಾತ್ಮಕ ಸನ್ನಿವೇಶಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಧೋನಿ ಹಾಗೂ ಕೊಹ್ಲಿ ಸರಳತೆ ಹಾಗೂ ಬೇರೆ ಆಟಗಾರರೊಂದಿಗೆ ಇರುವ ಸ್ನೇಹದಿಂದ ನನಗೆ ಟೀಂ ಇಂಡಿಯಾದ ಮೇಲೆ ಹೆಮ್ಮೆಯಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.